ದೇಶ

ದೆಹಲಿ ಪೊಲೀಸರ ಬಲೆಗೆ ಬಿದ್ದ ಸರಣಿ ಹಂತಕ, ಅತ್ಯಾಚಾರಿ

ನಾನು ಸೆರೆಯಾಗದೇ ಇದ್ದಿದ್ದರೆ, ಈ ಥರದ ಇನ್ನೂ ಹಲವು ಪಾತಕ ಎಸಗುತ್ತಿದ್ದೆ. ನಾನು ಮದ್ಯಪಾನ ಅಮಲಿನಲ್ಲಿ...

ದೆಹಲಿ ಪೊಲೀಸರ ಬಲೆಗೆ ಬಿದ್ದ ಸರಣಿ ಹಂತಕ, ಅತ್ಯಾಚಾರಿ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ``ನಾನು ಸೆರೆಯಾಗದೇ ಇದ್ದಿದ್ದರೆ, ಈ ಥರದ ಇನ್ನೂ ಹಲವು ಪಾತಕ ಎಸಗುತ್ತಿದ್ದೆ. ನಾನು ಮದ್ಯಪಾನ ಅಮಲಿನಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡುತ್ತಿದ್ದೆ. ನಶೆ ಇಳಿದ ಮೇಲೆ ಹೀಗೆ ಮಾಡಬಾರದು ಅನಿಸುತ್ತಿತ್ತು.

ಆ ಮಕ್ಕಳ ಪೋಷಕರ ಸ್ಥಾನದಲ್ಲಿ ನಾನು ಇದ್ದಿದ್ದರೆ ಈ ಪಾತಕಕ್ಕೆ ದೊಡ್ಡ ಶಿಕ್ಷೆ ಆಗಲಿ ಎಂದೇ ಕೇಳಿಕೊಳ್ಳುತ್ತಿದ್ದೆ '' ಆ ಅತ್ಯಾಚಾರಿ ಮುಖಕ್ಕೆ ಮುಸುಕು ಹಾಕಿಕೊಂಡು ಮಾಧ್ಯಮದೊಂದಿಗೆ ಹೇಳಿಕೊಂಡ ಮಾತುಗಳಿವು. ದೆಹಲಿ, ಉತ್ತರಪ್ರದೇಶದಲ್ಲಿ 6 ವರ್ಷಗಳಲ್ಲಿ 15 ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ಎಸಗಿ 11 ಮಕ್ಕಳ ಕೊಲೆ ಮಾಡಿರುವ ರವಿಂದರ್ ಕುಮಾರ್(24) ಕೊನೆಗೂ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆದರೆ ಆತನಿಗೆ ಕಿಂಚಿತ್ತೂ ಪಶ್ಚಾತ್ತಾಪ ವಿಲ್ಲವಂತೆ. 4 ದಿನಗಳ ಹಿಂದೆ ಕೊಲೆಯಾದ 6 ವರ್ಷದ ಹೆಣ್ಣುಮಗಳೊಬ್ಬಳ ಮೃತದೇಹದ ಬಳಿ ಆತನ ಡ್ರೈವಿಂಗ್ ಲೈಸೆನ್ಸ್ ಸಿಗದೇ ಇದ್ದಿದ್ದಲ್ಲಿ, ಈಗಲೂ ಆತ ತಪ್ಪಿಸಿಕೊಂಡೇಬಿಡುತ್ತಿದ್ದ. ಈತನ ಬಂಧನದಿಂದಾಗಿ ಮತ್ತೊಮ್ಮೆ ನಿತಾರಿ ಹತ್ಯಾ ಕಾಂಡದ ಘಟನೆ ನೆನಪಿಗೆ ಬಂದಂತಾಗಿದೆ.

ತನ್ನ ಮೇಲಿನ ಆರೋಪಗಳಷ್ಟನ್ನೂ ಒಪ್ಪಿಕೊಂಡಿರುವ ಕುಮಾರ್, ಈ ಮೊದಲು ಒಮ್ಮೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನೆಂದು ಪೊಲೀಸರು ಹೇಳಿದ್ದಾರೆ. 2008ರಲ್ಲಿ ಮೊದಲ ಪಾತಕ ಮಾಡಿದ ಈತ, ನಂತರ 4 ವರ್ಷದ ಅವಧಿಯಲ್ಲಿ ಹಲವು ಮಕ್ಕಳನ್ನು ಸ್ವೀಟು, ಚಾಕಲೇಟು ಆಸೆ ತೋರಿಸಿ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ.

2013ರಲ್ಲಿ ಅಲಿಗಡಕ್ಕೆ ತೆರಳಿ 4 ಅತ್ಯಾಚಾರ ನಡೆಸಿದ್ದಾನೆ. ಮುಂದೆ, ನೋಯ್ಡಾ, ಬಗಲ್ ಪುರ್ ಹೀಗೆ ಹೋದಲೆಲ್ಲ ಕನಿಷ್ಠ 2 ಅಪರಾಧ ಮಾಡಿದ್ದಾನೆ. ಮಾದಕ ವ್ಯಸನಿಯಾಗಿದ್ದ ಈತನಿಗೆ ಕೊಲೆ ಯಾಕೆ ಮಾಡುತ್ತಿದ್ದ ಎಂದು ಕೇಳಿದರೆ ``ನನಗೆ ಶಬ್ದ, ಗಲಾಟೆ ಅಂದರೆ ಆಗೋಲ್ಲ. ಮಕ್ಕಳು ತುಂಬ ಗಲಾಟೆ ಮಾಡ್ತಾರೆ. ಅವರನ್ನು ಸುಮ್ಮನಾಗಿಸಲು ಹೀಗೆ ಮಾಡುತ್ತಿದ್ದೆ'' ಎಂದು ಪ್ರತಿಕ್ರಿಯೆ ನೀಡುತ್ತಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.