ಅರೇಬಿಕ್ ಶಿಕ್ಷಣಕ್ಕಾಗಿ ಇಸ್ಲಾಂ ಗೆ ಮತಾಂತರಗೊಂಡ ಇಂಜಿನಿಯರಿಂಗ್ ಪದವೀಧರೆ!
ತಮಿಳುನಾಡಿನ ಏರೊನಾಟಿಕಲ್ ಇಂಜಿನಿಯರಿಂಗ್ ಪದವಿಧರೆಯೊಬ್ಬಳು ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ವಿಲ್ಲುಪುರಂ: ತಮಿಳುನಾಡಿನ ಏರೊನಾಟಿಕಲ್ ಇಂಜಿನಿಯರಿಂಗ್ ಪದವಿಧರೆಯೊಬ್ಬಳು ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಉಲುಂದುರ್ ಪೇಟೆಯ ಪಚಿಯಪ್ಪ ನಗರದ ಪ್ರೇಮಲತಾ ಎಂಬ ಮಹಿಳೆ ಮನೆ ಬಿಟ್ಟು ಹೋಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದ ಪ್ರೇಮಲತಾ, ಅಜ್ಜಿ ಕಸ್ತೂರಿಯ ಮನೆಯಲ್ಲಿದ್ದುಕೊಂಡು ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರು, ಇದಾದ ಬಳಿಕ ಮೂರು ತಿಂಗಳ ತರಬೇತಿಗೆಂದು ತೆರಳಿದ್ದ ಆಕೆ ಕಳೆದ ವಾರ ಮನೆಗೆ ಬಂದಿದ್ದರು. ಆದರೆ ಮನೆಗೆ ಬಂದ ಕೆಲವೇ ದಿನಗಳಲ್ಲಿ ಪ್ರೇಮಲತಾ ಇದ್ದಕ್ಕಿದ್ದಂತೆಯೇ ಕಾಣೆಯಾಗಿದ್ದು ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರೇಮಲತಾ ಕಡಲೂರು ಜಿಲ್ಲೆಯ ಮಂಗಳಂಪೇಟೆ ನಲ್ಲಿರುವ ಅರೇಬಿಕ್ ಕಾಲೇಜಿನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.
ಪ್ರಕರಣದ ಸಂಬಂಧ ವಿಚಾರಣೆಗೊಳಪಡಿಸಿದಾಗ ತಾನು ಸ್ವಇಚ್ಛೆಯಿಂದ ಮನೆ ಬಿಟ್ಟು ಬಂದಿದ್ದು ಹಲವು ತಿಂಗಳುಗಳ ಹಿಂದೆಯೇ ಇಸ್ಲಾಂ ಗೆ ಮತಾಂತರಗೊಂಡಿರುವುದಾಗಿ ಪ್ರೇಮಲತಾ ತಿಳಿಸಿದ್ದಾರೆ. ಅಲ್ಲದೇ ತನ್ನ ಹೆಸರನ್ನು ಆಯೇಷಾ ದುಲ್ ಅಪ್ರಿಯಾ ಎಂದು ಬದಲಾಯಿಸಿಕೊಂಡಿದ್ದು ಅರೇಬಿಕ್ ಶಿಕ್ಷಣ ಕಲಿಯಲು ಕಾಲೇಜಿಗೆ ಸೇರಿರುವುದಾಗಿ ತಿಳಿಸಿದ್ದಾರೆ.
ತಾನು ಇಸ್ಲಾಂ ಗೆ ಮತಾಂತರವಾಗಿರುವುದಕ್ಕೆ ಕುಟುಂಬದವರ ವಿರೋಧ ವ್ಯಕ್ತವಾಗಬಹುದೆಂಬ ಕಾರಣಕ್ಕೆ ಈ ವಿಷಯವನ್ನು ಆಕೆ ಯಾರಿಗೂ ತಿಳಿಸಿಲ್ಲ. ಅಂತೆಯೇ ಮತಾಂತರಗೊಂಡಿರುವುದಕ್ಕೆ ಕಾರಣವನ್ನು ನೀಡಿಲ್ಲ. ಕುಟುಂಬದವರಿಗೆ ಮಾಹಿತಿ ನೀಡಿದ ಪೊಲೀಸರು ಪೋಷಕರೊಂದಿಗೆ ವಾಪಸ್ ತೆರಳಲು ಸೂಚಿಸಿದರು ಆಕೆ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಪ್ರೇಮಲತಾರನ್ನು ಹಾಜರುಪಡಿಸಿದ್ದು, ಅರೇಬಿಕ್ ಶಿಕ್ಷಣ ಮುಂದುವರೆಸಲು ಆಕೆಯನ್ನು ವಾಪಸ್ ಕಾಲೇಜಿಗೆ ಕರೆದುಕೊಂಡು ಹೋಗಲು ನ್ಯಾಯಾಲಯ ಆದೇಶ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


