ಕಳೆದ ವರ್ಷ ದೇಶದಲ್ಲಿ 5650 ಅನ್ನದಾತರು ಆತ್ಮಹತ್ಯೆಗೆ ಬಲಿ
2014ರಲ್ಲಿ ಆತ್ಮಹತ್ಯೆಗೀಡಾದ ಒಟ್ಟು ರೈತರ ಸಂಖ್ಯೆ 5650. ಇದರಲ್ಲಿ ಮಹಾರಾಷ್ಟ್ರ, ತೆಲಂಗಾಣ ಮತ್ತು ಛತ್ತೀಸ್‍ಗಡದ್ದೇ ಸಿಂಹಪಾಲು! ನ್ಯಾಷನಲ್ ಕ್ರೈಮ್ ...

ನವದೆಹಲಿ: 2014ರಲ್ಲಿ ಆತ್ಮಹತ್ಯೆಗೀಡಾದ ಒಟ್ಟು ರೈತರ ಸಂಖ್ಯೆ 5650. ಇದರಲ್ಲಿ ಮಹಾರಾಷ್ಟ್ರ, ತೆಲಂಗಾಣ ಮತ್ತು ಛತ್ತೀಸ್‍ಗಡದ್ದೇ ಸಿಂಹಪಾಲು! ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ದೇಶದಲ್ಲಿ 2014ರಲ್ಲಿ ನಡೆದ ಅಪಘಾತ ಮತ್ತು ಆತ್ಮಹತ್ಯೆ ಸಾವುಗಳ ವಿವರ ಕಲೆಹಾಕಿದ್ದು, ಮಹಾರಾಷ್ಟ್ರದ 2598, ತೆಲಂಗಾಣದ 89 ಹಾಗೂ ಮಧ್ಯಪ್ರದೇಶದ 826 ಮಂದಿ ರೈತರು ಆತ್ಮಹತ್ಯೆಗೆ ಬಲಿಯಾಗಿದ್ದಾರೆಂದು ತಿಳಿಸಿದೆ. ಸಾಲಬಾಧೆ ಕಾರಣ ನೀಡಿ ಸತ್ತವರ ಸಂಖ್ಯೆಯೇ ಹೆಚ್ಚು ಎಂದು ಸಮೀಕ್ಷೆ ತಿಳಿಸಿದ್ದು ಮಿಕ್ಕಂತೆ ಕೌಟುಂಬಿಕ, ಬೆಳೆನಾಶ, ಅನಾರೋಗ್ಯದಿಂದ ಬೇಸತ್ತು ಜೀವಬಿಟ್ಟಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತೆಲಂಗಾಣದಲ್ಲಿ ಅತಿ ಹೆಚ್ಚು ಅಂದರೆ ಶೇ.31.1ರಷ್ಟು ರೈತ ಮಹಿಳೆಯರ ಆತ್ಮಹತ್ಯೆ ದಾಖಲಾಗಿದ್ದು, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ನಂತರದ ಸ್ಥಾನಗಳಲ್ಲಿವೆ. ಆತ್ಮಹತ್ಯೆಗೀಡಾದ ರೈತರಲ್ಲಿ 30ರಿಂದ 50ರ ವಯೋಮಾನನದವರ ಸಂಖ್ಯೆಯೇಹೆಚ್ಚು. ಕರ್ನಾಟಕ ಕೂಡ ಆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಒಟ್ಟು 321 ರೈತರ ಆತ್ಮಹತ್ಯೆಗಳು ದಾಖಲಾಗುವ ಮೂಲಕ 5ನೇ ಸ್ಥಾನದಲ್ಲಿದೆ. ಒಟ್ಟು ಆತ್ಮಹತ್ಯೆ ಸಂಖ್ಯೆಯಲ್ಲೂ 10,745 ಸಾವುಗಳೊಂದಿಗೆ ರಾಜ್ಯ 4ನೇ ಸ್ಥಾನ ಪಡೆದಿದೆ.ಒಟ್ಟು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಸಣ್ಣಪ್ರಮಾಣದ ಇಳಿಕೆಯಾಗಿದ್ದು, 2013ರಲ್ಲಿ 1,34,799 ಸಾವುಗಳಾಗಿದ್ದರೆ 2014ರಲ್ಲಿ 1,31,666ಕ್ಕೆ ಇಳಿದಿರುವುದಾಗಿ ಎನ್‍ಸಿಆರ್‍ಬಿ ತಿಳಿಸಿದೆ. ಈ ಪಟ್ಟಿ ಯಲ್ಲೂ ಮಹಾರಾಷ್ಟ್ರವೇ ಮುಂಚೂಣಿಯಲ್ಲಿದ್ದು 16,307 ಸಾವುಗಳು ಸಂಭವಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


