ದೇಶ

ಪುರಿ ಜಗನ್ನಾಥ ಯಾತ್ರೆ ವೇಳೆ ಕಾಲ್ತುಳಿತ: ಇಬ್ಬರು ಸಾವು

ರಥ ಯಾತ್ರೆ ಸಮಯದಲ್ಲಿ ಉಂಟಾದ ಕಾಲ್ತುಳಿತಕ್ಕೆ ಇಬ್ಬರು ಸಾವಿಗೀಡಾಗಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ...

ಪುರಿ ಜಗನ್ನಾಥ ಯಾತ್ರೆ ವೇಳೆ ಕಾಲ್ತುಳಿತ: ಇಬ್ಬರು ಸಾವು
ಪುರಿ ಜಗನ್ನಾಥ ಯಾತ್ರೆ ಸಮಯದಲ್ಲಿ ಕಂಡುಬಂದ ಜನಜಂಗುಳಿ
Published On :

ಪುರಿ: ಮೊನ್ನೆ ಆಂಧ್ರಪ್ರದೇಶದ ಗೋದಾವರಿ ನದಿ ತೀರದಲ್ಲಿ ಮಹಾ ಪುಷ್ಕರದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಹಲವು ಮಂದಿ ಸಾವಿಗೀಡಾಗಿರುವ ನೆನಪು ಮಾಸುವ ಮುನ್ನವೇ ಇಂದು ಒರಿಸ್ಸಾದ ಪುರಿ ಜಗನ್ನಾಥ ರಥ ಯಾತ್ರೆ ಸಂದರ್ಭದಲ್ಲಿಯೂ ಇಂತಹದ್ದೇ ಘಟನೆ ಮರುಕಳಿಸಿದೆ. ರಥ ಯಾತ್ರೆ ಸಮಯದಲ್ಲಿ ಉಂಟಾದ ಕಾಲ್ತುಳಿತಕ್ಕೆ ಇಬ್ಬರು ಸಾವಿಗೀಡಾಗಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ಬಿಗಿ ಭದ್ರತೆ ನಡುವೆ ಜಗನ್ನಾಥ ದೇವರ ಶತಮಾನದ ಮೊದಲ ನಬಕಲೆಬಾರ್ ರಥ ಯಾತ್ರೆ ಆರಂಭಗೊಂಡಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಸಾವು ಸಂಭವಿಸಿದೆ.

ಈಗಲೂ ಭಕ್ತರ ಉಲ್ಲಾಸ, ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಪುರಿಗೆ ಜನಸಾಗರವೇ ಹರಿದುಬರುತ್ತಿದೆ. ನಬಕಲೆಬಾರ್  ಅಂದರೆ ಜಗನ್ನಾಥ ದೇವರ ವಿಗ್ರಹದ ಶರೀರವನ್ನು ಬದಲಾಯಿಸುವುದು ಎಂದರ್ಥ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.