ದೇಶ

ಪಾಕ್ ಮೊದಲ ಪ್ರಧಾನಿ ಕುಟುಂಬ ಕೇಳುತ್ತಿದೆ ಅರ್ಧ ಮುಜಾಫರ್ ನಗರ!

ಒಂದು ವೇಳೆ ಪಾಕಿಸ್ತಾನದ ಮೊದಲ ಪ್ರಧಾನಿ ಲಿಖಾಯತ್ ಅಲಿ ಖಾನ್ ಸಂಬಂಧಿಕರು ಈ ಯುದ್ಧದಲ್ಲಿ ಗೆದ್ದರೆ ಉತ್ತರಪ್ರದೇಶದ ಮುಜಾಫರ್ ನಗರದ ಅರ್ಧ ...

ಪಾಕ್ ಮೊದಲ ಪ್ರಧಾನಿ ಕುಟುಂಬ ಕೇಳುತ್ತಿದೆ ಅರ್ಧ ಮುಜಾಫರ್ ನಗರ!
ಲಿಯಾಕತ್ ಅಲಿ ಖಾನ್
Published On :

ನವದೆಹಲಿ: ಒಂದು ವೇಳೆ ಪಾಕಿಸ್ತಾನದ ಮೊದಲ ಪ್ರಧಾನಿ ಲಿಖಾಯತ್ ಅಲಿ ಖಾನ್ ಸಂಬಂಧಿಕರು ಈ ಯುದ್ಧದಲ್ಲಿ ಗೆದ್ದರೆ ಉತ್ತರಪ್ರದೇಶದ ಮುಜಾಫರ್ ನಗರದ ಅರ್ಧ ಭಾಗ ಅವರ ಪಾಲಾಗಲಿದೆ.  ಹೌದು, ಮುಜಾಫರ್ ನಗರಕ್ಕೆ ಸಂಬಧಿಸಿದ ಭೂವ್ಯಾಜ್ಯ ಈಗ ಬಾರಿ ಕುತೂಹಲ ಹುಟ್ಟುಹಾಕಿದೆ. ಈ ಬಗ್ಗೆ ಶುಕ್ರವಾರ ``ದ ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾರಿ ಮೌಲ್ಯದ್ದು: ಇದು ಒಟ್ಟಾರೆ ರೂ. 674 ಕೋಟಿ ಭೂ ವ್ಯಾಜ್ಯ. ಇದು ಲಿಖಾಯತ್ ಅಲಿ ಖಾನ್ ಹಾಗೂ ಅವರ ಸಂಬಧಿಕರದು ಎನ್ನುವ ಬೇಡಿಕೆ ವಾದ ಹುಟ್ಟಿಕೊಂಡಿದೆ. ಆದರೆ, ಜಿಲ್ಲಾಡಳಿತ ಮಾತ್ರ ಹಳೆಯ ದಾಖಲೆಗಳನ್ನು ಕೆದಕಿ ನೋಡಿದ್ದು, ಈ ವಾದ ಸುಳ್ಳೆಂದು ಘೋಷಿಸಿದೆ. ಹನ್ನೆರಡು ವರ್ಷಗಳ ಹಿಂದೆ ಲಿಖಾಯತ್ ಅಲಿ ಸಂಬಧಿಕರೆಂದು ಹೇಳಿಕೊಂಡ ಕೆಲವು ಸ್ಥಳೀಯರು ಉತ್ತರಪ್ರದೇಶದ ಕಂದಾಯ ಆಯುಕ್ತರಿಗೆ ಮುಜಾಫರ್‍ನಗರದ ಅರ್ಧ ಆಸ್ತಿ ತಮಗೆ ಸೇರಿದ್ದೆಂದು ಸಾರಿದ್ದರು.

ಜಿಲ್ಲಾಧಿಕಾರಿ ನಿವಾಸ, ರೈಲ್ವೆ ನಿಲ್ದಾಣ, ಕೇಂದ್ರೀಯ ಶಾಲೆ ಮತ್ತಿತರ ಸರ್ಕಾರಿ ಕಚೇರಿಗಳು ಈ ಭೂಮಿಯಲ್ಲೇ ಇದ್ದವು. ಕಂದಾಯ ಆಯುಕ್ತರು ಎರಡು ವಾರಗಳ ಹಿಂದಷ್ಟೇ ಮುಜಾಫರ್‍ನಗರ ಜಿಲ್ಲಾಧಿಕಾರಿಗೆ ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ ನಿಖಿಲ್ ಚಂದ್ರ ಶುಕ್ಲಾ, ಇದೊಂದು ಸುಳ್ಳು ಪ್ರಕರಣ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.