ಕಿಶನ್‌ಜೀ ಸಾವಿಗೆ ಮಮತಾ ಬ್ಯಾನರ್ಜಿ ಸರ್ಕಾರ ಕಾರಣ: ಅಭಿಷೇಕ್ ಬ್ಯಾನರ್ಜಿ
ಕೆಲವು ದಿನಗಳ ಹಿಂದಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆ ಗ್ರಾಸವಾಗಿದ್ದ ಪಶ್ಚಿಮ ಬಂಗಾಳದ ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ, ಮಾವೋವಾದಿ ನಾಯಕ...

ಕೋಲ್ತತಾ: ಕೆಲವು ದಿನಗಳ ಹಿಂದಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆ ಗ್ರಾಸವಾಗಿದ್ದ ಪಶ್ಚಿಮ ಬಂಗಾಳದ ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ, ಮಾವೋವಾದಿ ನಾಯಕ ಕಿಶನ್‌ಜೀ ಸಾವಿಗೆ ಮಮತಾ ಬ್ಯಾನರ್ಜಿ ಅವರ ಸರ್ಕಾರವೇ ಕಾರಣ ಎಂದು ಹೇಳುವ ಮೂಲಕ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಈ ಕುರಿತಂತೆ ಮಿಡ್ನಾಪುರ ಜಿಲ್ಲೆಯ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ಅವರು, ಮವೋವಾದಿ ನಾಯಕ ಕಿಶನ್ ಜೀ ಅವರನ್ನು ಹತ್ಯೆ ಮಾಡಿರುವುದು ಮಮತಾ ಬ್ಯಾನರ್ಜಿ ಸರ್ಕಾರದ ದೊಡ್ಡ ಯಶಸ್ಸು. ಶಸ್ತ್ರಾಸ್ತ್ರವನ್ನು ಸ್ವಂತ ದೇಶ ರಕ್ಷಿಸಲಷ್ಟೇ ಬಳಸಬೇಕು. ಅದನ್ನು ಬಿಟ್ಟು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಶಸ್ತ್ರಾಸ್ತ್ರ ಬಳಸುವ ವ್ಯಕ್ತಿಗೆ ರಾಜ್ಯದಲ್ಲಿ ಇದೇ ರೀತಿ ಪಾಠ ಹೇಳಿಕೊಡಲಾಗುತ್ತದೆ ಎಂದು ಹೇಳಇದ್ದಾರೆ.
ಸಾಮಾನ್ಯ ವ್ಯಕ್ತಿಯಾಗಲಿ ಅಥವಾ ವಿರೋಧಿಗಳೇ ಆಗಲಿ ನಮಗೆ ಯಾರನ್ನು ಸಾಯಿಸುವ ಉದ್ದೇಶವಿಲ್ಲ. ಕಿಶನ್ ಜೀ ಸಾವಿನ ಹಿಂದೆ ಯಾವುದೇ ರೀತಿಯ ಪೂರ್ವಯೋಜನೆ ಇರಲಿಲ್ಲ. ಆದರೆ, ಅವರನ್ನು ಸಾಯಿಸುವ ಸನ್ನಿವೇಶ ಇದಕ್ಕಿಂತೆ ಎದುರಾಗಿದೆ. ನಾನು ದೆಹಲಿಯಲ್ಲಿದ್ದಾಗ ಈ ವಿಚಾರ ಪೊಲೀಸರಿಗೆ ತಿಳಿದಿರಲಿಲ್ಲ. ಕಿಶನ್ ಜೀ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರೆ, ಇದನ್ನು ನಾವೇ ಮೊದಲು ಹೇಳುತ್ತಿದ್ದೆವು ಎಂದು ಮಮತಾ ಬ್ಯಾನರ್ಜಿ ಕಿಶನ್ ಜೀ ಹತ್ಯೆಗೀಡಾಗಿದ್ದ ಸಂದರ್ಭದಲ್ಲಿ ಹೇಳಿದ್ದರು. ಆದರೆ, ಮಮತಾ ಬ್ಯಾನರ್ಜಿ ಅವರ ಹೇಳಿಕೆ ವಿರುದ್ಧವಾಗಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಇದೀಗ ಈ ರೀತಿಯ ಹೇಳಿಕೆ ನೀಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಕಿಶನ್‌ಜಿ ಎಂತಲೇ ಗುರುತಿಸಿಕೊಂಡಿದ್ದ, 58 ವರ್ಷದ ಮುಲ್ಲೊಜುಲಾ ಕೋಟೇಶ್ವರ ರಾವ್ ಅಲಿಯಾಸ್ ಕಿಶನ್‌ಜಿ ಅವರನ್ನು ಪ್ರಹ್ಲಾದ್, ಮುರಳಿ, ರಾಮ್‌ಜಿ, ಜಯಂತ್ ಹಾಗೂ ಶ್ರೀಧರ್ ಎಂಬ ಅಡ್ಡ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕಿಶನ್ ಜಿ ಅವರು ಮಾವೊವಾದಿಗಳ ಪಾಲಿಟ್‌ಬ್ಯೂರೊ ಸದಸ್ಯರಾಗಿದ್ದರು. ಅಲ್ಲದೆ, ಜಂಗಲ್‌ಮಹಲ್‌ನಲ್ಲಿನ ಸಶಸ್ತ್ರ ಕಾರ್ಯಾಚರಣೆ ತಂಡದ ನೇತೃತ್ವವನ್ನೂ ವಹಿಸಿಕೊಂಡಿದ್ದರು. 2010ರಲ್ಲಿ ಸಿಲ್ದಾ ಶಿಬಿರದಲ್ಲಿ ನಡೆದ ದಾಳಿಯ ಹೊಣೆಯನ್ನು ಅವರು ಹೊತ್ತುಕೊಂಡಿದ್ದ ಇವರನ್ನು 2011ರ ನ.11 ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ಅಲ್ಲಿನ ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


