ಮಕ್ಕಳನ್ನು ಲೈಂಗಿಕ ಪ್ರಚೋದನೆಗೊಳಪಡಿಸಿದ `ಮೇಕಪ್ ಮ್ಯಾನ್' ಬಂಧನ
ಕಾಮಪ್ರಚೋದಕ ವಿಡಿಯೋಗಳನ್ನು ತೋರಿಸುವ ಮೂಲಕ ಮಕ್ಕಳನ್ನು ಲೈಂಗಿಕವಾಗಿ ಪ್ರಚೋದಿಸಲೆತ್ನಿಸಿದ ಸಿನಿಮಾದ ಮೇಕಪ್ ಸಹಾಯಕನನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈನ ಕೊಡಂಬಕ್ಕಮ್ ನಲ್ಲಿ ನಡೆದಿದೆ...

ಚೆನ್ನೈ:ಕಾಮಪ್ರಚೋದಕ ವಿಡಿಯೋಗಳನ್ನು ತೋರಿಸುವ ಮೂಲಕ ಮಕ್ಕಳನ್ನು ಲೈಂಗಿಕವಾಗಿ ಪ್ರಚೋದಿಸಲೆತ್ನಿಸಿದ ಸಿನಿಮಾದ ಮೇಕಪ್ ಸಹಾಯಕನನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈನ ಕೊಡಂಬಕ್ಕಮ್ ನಲ್ಲಿ ನಡೆದಿದೆ.
ಜಹೀರ್ ಹುಸೇನ್ ಎಂಬಾತನು ತಾನು ವಾಸಿಸುತ್ತಿದ್ದ ಮನೆಯ ಸಮೀಪದ ಮಕ್ಕಳನ್ನು ಹಲವಾರು ದಿವಸಗಳಿಂದ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ಸರ್ಕಾರೇತರ ಸಂಸ್ಥೆಯೊಂದು ಮಕ್ಕಳಿಗೆ ಸಲಹೆ ನೀಡುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದಾಗ ಅವರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ.
ಆರಂಭದಲ್ಲಿ ಜಹೀರ್ ಹುಸೇನ್ ತನ್ನ ಏರಿಯಾದ ಮಕ್ಕಳನ್ನು ಕರೆದು ತನ್ನ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳ ವಿಡಿಯೋ ತೋರಿಸುತ್ತಿದ್ದ. ನಂತರ ತನ್ನ ಮನೆಯಲ್ಲಿ ಡಿವಿಡಿಯಲ್ಲಿ ಪೋರ್ನೋಗ್ರಫಿ ಚಿತ್ರಗಳನ್ನು ವೀಕ್ಷಿಸುವಂತೆ ಪ್ರಚೋದಿಸುತ್ತಿದ್ದ. ನಂತರ ಆ ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ದೈಹಿಕವಾಗಿ ಹಿಂಸಿಸುತ್ತಿದ್ದ ಎಂಬ ವಿಷಯ ಎನ್ ಜಿಒ ಸದಸ್ಯರು ಮಕ್ಕಳನ್ನು ವಿಚಾರಿಸಿದ ವೇಳೆ ಗೊತ್ತಾಗಿದೆ.
ವಡಪಲನಿ ಪೊಲೀಸರು ಹುಸೇನ್ ವಿರುದ್ಧ ಲೈಂಗಿಕ ಅಪರಾಧದಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆಯಡಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


