ಬ್ಯಾಂಕ್ ಖಾತೆಯಲ್ಲಿ ರು. 10 ಕೋಟಿಯಿದ್ರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಿದ್ದ!
ಕುಬೇರನಾಗಿದ್ದರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಾ ಬಡವನಂತೆ ನಟಿಸುತ್ತಿದ್ದ ವ್ಯಕ್ತಿಯೀಗ ಪೊಲೀಸರ ಅತಿಥಿಯಾಗಿದ್ದಾನೆ...

ಕುವೈಟ್ ಸಿಟಿ: ಕುಬೇರನಾಗಿದ್ದರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಾ ಬಡವನಂತೆ ನಟಿಸುತ್ತಿದ್ದ ವ್ಯಕ್ತಿಯೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿದೇಶಿಯೊಬ್ಬ ಕುವೈಟ್‍ನ ಮಸೀದಿಯೊಂದರ ಮುಂದೆ ಭಿಕ್ಷುಕನಂತೆ ಕುಳಿತು, ಎಲ್ಲರ ಮುಂದೆ ಕೈಯೊಡ್ಡುತ್ತಿದ್ದ. 'ನನಗೆ ಹಣದ ಬಹಳ ಅವಶ್ಯಕತೆಯಿದೆ. ಸ್ವಂತ ಮನೆಯೂ ಇಲ್ಲದ ನತದೃಷ್ಟ ನಾನು' ಎನ್ನುತ್ತಾ ಮಸೀದಿಗೆ ಬಂದವರಿಂದ ಹಣ ಪಡೆಯುತ್ತಿದ್ದ.
ಗಸ್ತು ತಿರುಗುತ್ತಿದ್ದ ಫೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಾಗಲೇ ಸತ್ಯ ಬಯಲಾಗಿದ್ದು. ವಿಚಾರಣೆ ನಡೆಸಿ ನೋಡಿದಾಗ ಈತನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ ರು. 10 ಕೋಟಿ(5 ಲಕ್ಷ ಕುವೈಟ್ ದಿನಾರ್)ಯಿರುವುದು ಬೆಳಕಿಗೆ ಬಂದಿದೆ. ಗಲ್ಫ್ ಸಹಕಾರ ಮಂಡಳಿಯ ಸದಸ್ಯ ರಾಷ್ಟ್ರವಾಗಿರುವ ಕುವೈಟ್‍ನಲ್ಲಿ ಭಿಕ್ಷೆ ಬೇಡುವುದು ಕಾನೂನುಬಾಹಿರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


