ಭೂ ಚರ್ಚೆ: ಪ್ರಧಾನಿ ಕರೆದ ಸಭೆಗೆ ಕಾಂಗ್ರೆಸ್ ಸಿಎಂಗಳ ಬಹಿಷ್ಕಾರ?
ಸಂಸತ್‍ನ ಮುಂಗಾರು ಅಧಿವೇಶನದಲ್ಲಿ ಭೂಸ್ವಾಧೀನ ವಿಧೇಯಕವನ್ನು ಅಂಗೀಕರಿಸಲೇಬೇಕೆಂಬ ಗುರಿ ಕೇಂದ್ರ ಸರ್ಕಾರದ್ದು...

ನವದೆಹಲಿ: ಸಂಸತ್‍ನ ಮುಂಗಾರು ಅಧಿವೇಶನದಲ್ಲಿ ಭೂಸ್ವಾಧೀನ ವಿಧೇಯಕವನ್ನು ಅಂಗೀಕರಿಸಲೇಬೇಕೆಂಬ ಗುರಿ ಕೇಂದ್ರ ಸರ್ಕಾರದ್ದು. ಅದಕ್ಕಾಗಿ ಜು.15ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಪ್ರಧಾನಿ ಮೋದಿ ಆಯೋಜಿಸಿದ್ದಾರೆ. ಆದರೆ ಈ ಸಭೆಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಆಡಳಿತ ಇರುವ 9 ರಾಜ್ಯಗಳ ಮುಖ್ಯಮಂತ್ರಿಗಳು ಬಹಿಷ್ಕರಿಸುವ ಸಾಧ್ಯತೆ ಇದೆ. ಇದರ ಜತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸಲು ಅನಾನುಕೂಲ ಇದೆ ಎಂದು ಈ ಮೊದಲೇ ತಿಳಿಸಿದ್ದಾರೆ. ಹೀಗಾಗಿ, 30 ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ 10 ಮಂದಿ ಸಭೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್, ಮೋದಿ ಸರ್ಕಾರದ ಭೂಸ್ವಾಧೀನ ವಿಧೇಯಕವನ್ನು ರೈತ ವಿರೋಧಿ, ಕಾರ್ಪೋರೆಟ್ ಪರ ಎಂದು ಪ್ರತಿಪಾದಿಸುತ್ತಿದೆ ಮಾತ್ರವಲ್ಲ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಸೇರಿದಂತೆ ದೇಶಾದ್ಯಂತ ಪ್ರತಿಭಟನೆಯನ್ನೂ ನಡೆಸಿದೆ. ಭೂ ವಿಧೇಯಕ ಅನುಮೋದನೆಗೆ ಉಂಟಾಗಿರುವ ಕಗ್ಗಂಟು ನಿವಾರಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶ. 15ರಂದು ದೆಹಲಿಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ವಿಧೇಯಕದ ಬಗ್ಗೆ ಮೋದಿ ಸಿಎಂಗಳ ಜತೆ ಪ್ರಸ್ತಾಪಿಸಿ, ಬೆಂಬಲ ಕೋರುವ ಸಾಧ್ಯತೆ ಇದೆ. ಕೇರಳ, ಹಿಮಾಚಲ ಪ್ರದೇಶ, ಉತ್ತರಾ ಖಂಡ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಮಿಝೋರಾಂ ಕಾಂಗ್ರೆಸ್ ಆಡಳಿತವಿರುವ ಇತರ ರಾಜ್ಯಗಳು. ಕಾಂಗ್ರೆಸ್ ಆಡಳಿತವಿರುವ ಮುಖ್ಯಮಂತ್ರಿಗಳು ವಿಧೇಯಕ ವನ್ನು ಪರಿಶಿಲೀಸುತ್ತಿರುವ ಸಂಸದೀಯ ಸಮಿತಿಗೆ ಪತ್ರ ಬರೆದಿದ್ದಾರೆ. ಪರಿಷ್ಕೃತ ವಿಧೇಯಕ ಅನುಷ್ಠಾನಕ್ಕೆ ರಾಜ್ಯಗಳಲ್ಲಿ ವಿರೋಧವಿದೆ. 2013ರ ವಿಧೇಯಕ ಯಾವುದೇ ಬದಲಾ ವಣೆ ತರ ಬಾರದು ಎಂದು ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


