ಕನಿಷ್ಠ ವೇತನ ರು. 160 ಪ್ರಸ್ತಾವನೆ'
ಕಂಪನಿ ಮುಚ್ಚಿದರೆ ಕಾರ್ಮಿಕರಿಗೆ ನೀಡುವ ಸೌಲಭ್ಯ ಹೆಚ್ಚಳ ಸೇರಿದಂತೆ ಕಾರ್ಮಿಕ ಕಾಯ್ದೆಗೆ ಹಲವು ಸುಧಾರಣೆಗಳು ತರಲು ಕೇಂದ್ರ ಕಾರ್ಮಿಕ ಸಚಿವಾಲಯ...

ಹೈದರಾಬಾದ್: ಕಂಪನಿ ಮುಚ್ಚಿದರೆ ಕಾರ್ಮಿಕರಿಗೆ ನೀಡುವ ಸೌಲಭ್ಯ ಹೆಚ್ಚಳ ಸೇರಿದಂತೆ ಕಾರ್ಮಿಕ ಕಾಯ್ದೆಗೆ ಹಲವು ಸುಧಾರಣೆಗಳು ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಇದೇ ಸಂದರ್ಭದಲ್ಲಿ ಕನಿಷ್ಠ ವೇತನವನ್ನು ದಿನಕ್ಕೆ ರು.160ಕ್ಕೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಮುಂದಿಟ್ಟಿದೆ.
ಕಾರ್ಮಿಕ ಕಾಯ್ದೆಯಲ್ಲಿನ ಹಲವಾರು ಕಾನೂನುಗಳನ್ನು 50 -60 ವರ್ಷಗಳ ಹಿಂದೆ ಮಾಡಿದ್ದಾಗಿವೆ. ಕಾರ್ಮಿಕ ಕಾಯ್ದೆಯನ್ನು 1925ರಲ್ಲಿ ಮಾಡಲಾಗಿದ್ದು ಇವೆಲ್ಲಕ್ಕೂ ಬದಲಾವಣೆ ತರುವ ಅಗತ್ಯವಿದೆ. ಅಂದರೆ ಅವುಗಳನ್ನು ಸರಳಗೊಳಿಬೇಕಾಗಿದೆ ಎಂದು ಕೇಂದ್ರ ಕಾರ್ಮಿಕ ಖಾತೆ ಸಹಾಯಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.
ಕಾರ್ಖಾನೆಗಳನ್ನು ಲಾಕ್‍ಔಟ್ ಮಾಡಿದರೆ ಸದ್ಯ ಕಾರ್ಮಿಕರು 15 ದಿನಗಳ ವೇತನ ಮಾತ್ರ ಪಡೆಯುತ್ತಿದ್ದಾರೆ. ಹೊಸ ಪ್ರಸ್ತಾವನೆಯಲ್ಲಿ 45 ದಿನಗಳಿಗೆ ಹೆಚ್ಚಿಸಲಾಗಿದೆ. ಯಾವುದೇ ಕಾರ್ಖಾನೆ ಮುಚ್ಚಿದಾಗಲೂ ಕಾರ್ಮಿಕರ ಭದ್ರತೆ ಕುರಿತು ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. ಕಾರ್ಖಾನೆಗಳು ಕಾರ್ಮಿಕರನ್ನು ಹೊರಗಟ್ಟಲು ಈ ಪ್ರಸ್ತಾವನೆಗಳು ನೆರವಾಗಲಿವೆ ಎಂಬ ಪ್ರಶ್ನೆಗೆ, ಕಾರ್ಖಾನೆ ಮುಚ್ಚುವ ಪರಿಸ್ಥಿತಿ ಎದುರಾದರೆ ಉತ್ತಮ ಪರಿಹಾರ ಕೊಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


