ರಾಷ್ಟ್ರಗೀತೆಯಲ್ಲಿ `ಅಧಿನಾಯಕ' ಪದ ಬದಲಿಸಿ: ಕಲ್ಯಾಣ್ ಸಿಂಗ್
ರಾಷ್ಟ್ರಗೀತೆಯ ಬಗ್ಗೆ ಚಕಾರವೆತ್ತುವ ಮೂಲಕ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‍ಸಿಂಗ್ ವಿವಾದಕ್ಕೆ ಗುರಿಯಾಗಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರಗೀತೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದರೂ, ಸದ್ಯಕ್ಕೆ ತಣ್ಣಗಿದ್ದ...

ಜೈಪುರ: ರಾಷ್ಟ್ರಗೀತೆಯ ಬಗ್ಗೆ ಚಕಾರವೆತ್ತುವ ಮೂಲಕ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‍ಸಿಂಗ್ ವಿವಾದಕ್ಕೆ ಗುರಿಯಾಗಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರಗೀತೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದರೂ, ಸದ್ಯಕ್ಕೆ ತಣ್ಣಗಿದ್ದ ವಿವಾದವನ್ನು ಕಲ್ಯಾಣ್‍ಸಿಂಗ್ ಮಂಗಳವಾರ ಮತ್ತೆ ಬಡಿದೆಬ್ಬಿಸಿದ್ದಾರೆ.
ರಾಜಸ್ಥಾನ ವಿವಿ ಘಟಿಕೋತ್ವದಲ್ಲಿ ಭಾಗಿಯಾಗಿದ್ದ ಕಲ್ಯಾಣ್ ಸಿಂಗ್ ಅವರು, ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ರಾಷ್ಟ್ರಗೀತೆಯ `ಜನಗಣ ಮನ ಅಧಿನಾಯಕ ಜಯಹೇ...' ಸಾಲಿನಲ್ಲಿ `ಅಧಿನಾಯಕ' ಪದ ಬ್ರಿಟಿಷ್ ಅಧಿಕಾರವನ್ನು ಹೊಗಳುತ್ತದೆ. ಆದ್ದರಿಂದ ಆ ಪದವನ್ನು ತೆಗೆದುಹಾಕಿ ಅದರ ಬದಲಿಗೆ `ಮಂಗಳ'ಎಂಬ ಪದ ಬಳಸಬೇಕು. `ಜನಗಣಮನ ಮಂಗಳ ಗಾಯೆ...' ಎಂದು ಹಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
``ರವೀಂದ್ರನಾಥ್ ಟಾಗೋರ್ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಆಕ್ಷೇಪ ರಾಷ್ಟ್ರಗೀತೆಯ ಆ ಪದದ ಬಗ್ಗೆ ಮಾತ್ರ. ರಾಜ್ಯಪಾಲರನ್ನು ಮಹಾಮಹಿಮ್, ಹಿಸ್‍ಎಕ್ಸಲೆನ್ಸಿ ಎಂದು ಸಂಬೋಧಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇನೆ'' ಎಂದಿದ್ದಾರೆ. ಕೆಲ ದಿನಗಳ ಹಿಂದೆ ಅಕ್ಬರ್ ಮತ್ತು ರಾಣಾಪ್ರತಾಪ್ ರನ್ನು ತುಲನೆ ಮಾಡಿ, ರಾಣಾಪ್ರತಾಪ್ ಗ್ರೇಟ್ ಎಂದು ಸುದ್ದಿ ಮಾಡಿದ್ದ ಕಲ್ಯಾಣ್‍ಸಿಂಗ್, ಆ ಮಾತುಗಳನ್ನು ಪುನರುಚ್ಚರಿಸಿ, ಔರಂಗ್‍ಜೇಬ್‍ಗಿಂತ ಶಿವಾಜಿ ಶ್ರೇಷ್ಠ, ವಿಕ್ಟೋರಿಯಾ ರಾಣಿಗಿಂತ ಝಾನ್ಸಿರಾಣಿ ಶ್ರೇಷ್ಟ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


