ಬಿಜೆಪಿಗಿಂತ ದೊಡ್ಡ ಜಾತಿವಾದಿ, ಕೋಮುವಾದಿ ಮತ್ತೊಂದಿಲ್ಲ: ನಿತೀಶ್ ಕುಮಾರ್
ದೇಶದಲ್ಲಿ ಬಿಜೆಪಿಗಿಂತ ದೊಡ್ಡ ಜಾತಿವಾದಿ ಹಾಗೂ ಕೊಮುವಾದಿ ಮತ್ತೊಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ...

ಪಾಟ್ನ: ದೇಶದಲ್ಲಿ ಬಿಜೆಪಿಗಿಂತ ದೊಡ್ಡ ಜಾತಿವಾದಿ ಹಾಗೂ ಕೊಮುವಾದಿ ಮತ್ತೊಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಾತಿ ಆಧಾರಿತ ಜನಗಣತಿ ನಡೆಸುತ್ತಿದೆ. ಆದರೆ, ಈ ಕುರಿತ ಫಲಿತಾಂಶವನ್ನು ಸಾರ್ವಜನಿಕರಿಗೆ ತಿಳಿಸುತ್ತಿಲ್ಲ. ಜಾತಿ ಆಧಾರಿತ ಜನಗಣತಿ ಫಲಿತಾಂಶವನ್ನು ಸರ್ಕಾರ ಜನರಿಂದ ಮುಚ್ಚಿಡುತ್ತಿದೆ ಎಂದು ಹೇಳಿದ್ದಾರೆ.
ವೋಟ್ ಬ್ಯಾಂಕ್ ಕುರಿತಂತೆ ಮಾತನಾಡುವ ಪಕ್ಷವೇ ಇಂದು ಜಾತಿವಾದ ಹಾಗೂ ಕೋಮುವಾದಗಳನ್ನು ಮಂಡಿಸುತ್ತಿದೆ. ಬಿಜೆಪಿಗಿಂತ ದೊಡ್ಡ ಜಾತಿವಾದಿ ಹಾಗೂ ಕೋಮುವಾದಿ ಮತ್ತೊಂದಿಲ್ಲ. ಜಾತಿ ಆಧಾರಿತ ಜನಗಣತಿ ಮಾಡುವ ಸರ್ಕಾರ ಅದರಿಂದ ಬಂದ ಫಲಿತಾಂಶವನ್ನು ಜನರಿಗೆ ತಿಳಿಸಬೇಕು. ಸರ್ಕಾರದ ಈ ವರ್ತನೆಯಿಂದಲೇ ತಿಳಿಯಬಹುದು ಜಾತಿ ಆಧಾರಿತ ಜನಗಣತಿ ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದನ್ನು ಎಂದು ನಿತೀಶ್ ಕುಮಾರ್ ಮೋದಿ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಸಹ ಜಾತಿ ಆಧಾರಿತ ಜನಗಣತಿ ಕುರಿತಂತೆ ಮೋದಿ ವಿರುದ್ಧ ಕಿಡಿಕಾರಿದ್ದರು. ಜಾತಿ ಜನಗಣತಿ ಫಲಿತಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕಾದದ್ದು ಸರ್ಕಾರದ ಕರ್ತವ್ಯ. ಮಾಹಿತಿ ಕೇಳುವ ಹಾಗೂ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗಿದೆ ಎಂದು ಹೇಳಿದ್ದರು.
ಜಾತಿ ಆಧಾರಿತ ಜನಗಣತಿ ಇದೀಗ ಕೇಂದ್ರದಲ್ಲಿ ಪ್ರತಿಪಕ್ಷಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


