ದೇಶ

ಹಳೇ ಕಾರು ಕೊಟ್ರೆ ಪ್ರೋತ್ಸಾಹ ಧನ, ಕೇಂದ್ರದ ಹೊಸ ಯೋಜನೆ

ಒಂದೇ ಓಕೆ, ಎರಡು ಯಾಕೆ?- ಇದು ಕುಟುಂಬ ಯೋಜನೆಗೆ ಸಂಬಂಧಿಸಿದ ಧ್ಯೇಯ ವಾಕ್ಯ. ಇದೇ ಮಾದರಿ ಯೋಜನೆಯನ್ನು ವಾಹನ ಬಳಕೆ ನಿಯಂತ್ರಣಕ್ಕೆ ತಂದರೆ ಹೇಗಿರುತ್ತದೆ...

ಹಳೇ ಕಾರು ಕೊಟ್ರೆ ಪ್ರೋತ್ಸಾಹ ಧನ, ಕೇಂದ್ರದ ಹೊಸ ಯೋಜನೆ
ಕೇಂದ್ರ ಸಚಿವ ನಿತಿನ್ ಗಡ್ಕರಿ
Published On :

ನವದೆಹಲಿ: ಒಂದೇ ಓಕೆ, ಎರಡು ಯಾಕೆ?- ಇದು ಕುಟುಂಬ ಯೋಜನೆಗೆ ಸಂಬಂಧಿಸಿದ ಧ್ಯೇಯ ವಾಕ್ಯ. ಇದೇ ಮಾದರಿ ಯೋಜನೆಯನ್ನು ವಾಹನ ಬಳಕೆ ನಿಯಂತ್ರಣಕ್ಕೆ ತಂದರೆ ಹೇಗಿರುತ್ತದೆ.

ಅದರ ಜೊತೆಗೆ ಹೆಚ್ಚಿನ ಪ್ರಮಾಣದ ತೆರಿಗೆ ಯನ್ನು ಕೇಂದ್ರದ ಬೊಕ್ಕಸಕ್ಕೆ ತುಂಬಿಸಲು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಯೋಜನೆ ಹಾಕಿಕೊಂಡಿದ್ದಾರೆ. ಕುಟುಂಬ ಯೋಜನೆ  ಅನುಷ್ಠಾನದಂತೆ ದೈನಂದಿನ ಅಗತ್ಯಕ್ಕೆ ಮಾತ್ರ ವಾಹನ ಬಳಸಬೇಕು. ಹಳೆಯ ಕಾರುಗಳನ್ನು ತ್ಯಜಿಸಿ ಹೊಸ ಕಾರು ಖರೀದಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ  ತೆರಿಗೆ ಪಾವತಿಯಾಗುತ್ತದೆ ಎಂದಿದ್ದಾರೆ.

ಅವರ ಪ್ರಕಾರ ಪ್ರತಿ ಹೊಸ ಕಾರಿನಿಂದ ಸರ್ಕಾರಕ್ಕೆ ರು.95 ಸಾವಿರ ಲಾಭವಾಗುತ್ತದೆ. ಹಳೆ ಕಾರು ಹಿಂತಿರುಗಿಸುವವರಿಗೆ ಅಲ್ಪ ಪ್ರಮಾಣದ ಪ್ರೋತ್ಸಾಹ ಧನ ನೀಡುವ ಚಿಂತನೆಯೂ  ಸರ್ಕಾರಕ್ಕಿದೆ. ದೊಡ್ಡ ಪ್ರಮಾಣದ ಕೈಗಾರಿಕಾ ಕ್ಷೇತ್ರಗಳಲ್ಲಿ ಹಳೆಯ ಕಾರುಗಳನ್ನು ಪುನರ್ ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ ಗಡ್ಕರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.