ದೇಶ

ಅಮರನಾಥ ಯಾತ್ರಿಗಳ ರಕ್ಷಣೆಗೆ "ಆಪರೇಷನ್ ಶಿವ"

ಪವಿತ್ರ ಯಾತ್ರೆ ಅಮರನಾಥ ಯಾತ್ರೆಯ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಶಂಕೆ ಮೂಡಿರುವ ಹಿನ್ನಲೆಯಲ್ಲಿ ಯಾತ್ರಾರ್ಥಿಗಳ ರಕ್ಷಣೆಗೆ ಭಾರತೀಯ ಸೇನೆ ಮತ್ತು ಕೇಂದ್ರ ಸರ್ಕಾರ "ಆಪರೇಷನ್ ಶಿವ" ಹೆಸರಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದೆ...

ಅಮರನಾಥ ಯಾತ್ರಿಗಳ ರಕ್ಷಣೆಗೆ "ಆಪರೇಷನ್ ಶಿವ"
ಅಮರನಾಥ ಯಾತ್ರೆ
Published On :
ನವದೆಹಲಿ: ಪವಿತ್ರ ಯಾತ್ರೆ ಅಮರನಾಥ ಯಾತ್ರೆಯ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಶಂಕೆ ಮೂಡಿರುವ ಹಿನ್ನಲೆಯಲ್ಲಿ ಯಾತ್ರಾರ್ಥಿಗಳ ರಕ್ಷಣೆಗೆ ಭಾರತೀಯ ಸೇನೆ ಮತ್ತು ಕೇಂದ್ರ ಸರ್ಕಾರ "ಆಪರೇಷನ್ ಶಿವ" ಹೆಸರಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದೆ.
ಸುಮಾರು 7,500 ಯೋಧರು "ಆಪರೇಷನ್ ಶಿವ" ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಇವರ ಜತೆಗೆ ಕೇಂದ್ರೀಯ ಅರೆ ಸೇನಾ ಪಡೆ ಹಾಗೂ ಸ್ಥಳೀಯ ಪೊಲೀಸ್ ಪಡೆಯ ಸುಮಾರು 10 ಸಾವಿರ ಸಿಬ್ಬಂದಿ ಕೂಡ ಯಾತ್ರಾರ್ಥಿಗಳ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಈ ನಡುವೆ ಅಮರನಾಥ ಯಾತ್ರೆಯಲ್ಲಿ ಪಾಲ್ಗೊಳ್ಳಲು ಗುರುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭದ್ರತಾ ಏರ್ಪಾಟುಗಳನ್ನು ಪರಿಶೀಲಿಸಿದರು.
ಅಮರನಾಥ ಯಾತ್ರೆಯ ಮೇಲೆ ಕೆಂಗಣ್ಣು ಬೀರಿರುವ ಉಗ್ರಗಾಮಿ ಸಂಘಟನೆ ಹಿಜ್ ಬುಲ್ ಮುಜಾಹಿದ್ದೀನ್ ಯಾವುದೇ ಕ್ಷಣದಲ್ಲಿ ದಾಳಿ ನಡೆಸಬಹುದು ಎಂದು ಈ ಹಿಂದೆ ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದವು. ಅಲ್ಲದೇ ಕಳೆದ ಎರಡು ತಿಂಗಳಿನಿಂದ ಇದು ಆಕ್ರಮಣಕ್ಕೆ ತಯಾರಿ ನಡೆಸುತ್ತಿದ್ದು, ಮೊದಲು ಟೆಲಿಕಾಂ ಸೆಕ್ಟರ್ ಗಳ ಮೇಲೆ ತನ್ನ ದೃಷ್ಠಿ ನೆಟ್ಟಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಿದ್ದರು.
ಹಿಜ್ ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ದಾಳಿಯ ನಿರ್ವಹಣೆಯನ್ನು ಪಾಕಿಸ್ತಾನದಲ್ಲಿರುವ ನಿರ್ವಾಹಕರು ನಿರ್ವಹಿಸುತ್ತಿದ್ದು, ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.  ತಮ್ಮ ದಾಳಿಯ ಮೊದಲ ಹಂತವಾಗಿ ಮೊದಲು ಎಲ್ಲಾ ರಕ್ಷಣಾ ಸಂಸ್ಥೆಗಳು ಅವಲಂಬಿಸಿರುವ ಟೆಲಿಕಾಂ ಟವರ್ಸ್ ಗಳ ಮೇಲೆ ಆಕ್ರಮಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಆ ಮೂಲಕ ಅಮರನಾಥ ಯಾತ್ರಾರ್ಥಿಗಳ ಸಂಪರ್ಕವನ್ನು ಕಡಿತಗೊಳಿಸಿ ಅವರಿಗೆ ತೊಂದರೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 
ಪ್ರಸ್ತುತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಸೇನೆ, "ಯಾತ್ರಾರ್ಥಿಗಳು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಯಾರಾದರೂ ಆಕ್ರಮಣ ಮಾಡಲು ಮುಂದಾದಲ್ಲಿ ಭದ್ರತಾ ಪಡೆಗಳಿಗೆ ವಿಶೇಷ ಮುನ್ಸೂಚನೆ (ಅಲರ್ಟ್ಸ್ ಟ್ಯೂನ್) ಬಂದು ತಲುಪುತ್ತದೆ. ಇದರಿಂದ ಉಗ್ರರ ದಾಳಿ ಪ್ರಯತ್ನವನ್ನು ವಿಫಲಗೊಳಿಸಬಹುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.