ದೇಶ

ಸಂಸದರ ವೇತನ ಶೇ.100, ಪಿಂಚಣಿ ಶೇ.75 ಹೆಚ್ಚಳಕ್ಕೆ ಆಗ್ರಹ

ಸಂಸದರ ವೇತನವನ್ನು ದುಪ್ಪಟ್ಟುಗೊಳಿಸುವಂತೆ ಹಾಗು ಮಾಜಿ ಸಂಸದರ ಪಿಂಚಣಿಯನ್ನು ಶೇ.75 ಹೆಚ್ಚಿಸುವಂತೆ ಸಂಸದೀಯ ಸಮಿತಿ...

ಸಂಸದರ ವೇತನ ಶೇ.100, ಪಿಂಚಣಿ ಶೇ.75 ಹೆಚ್ಚಳಕ್ಕೆ ಆಗ್ರಹ
ಸಂಸತ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಸಂಸದರ ವೇತನವನ್ನು ದುಪ್ಪಟ್ಟುಗೊಳಿಸುವಂತೆ ಹಾಗು ಮಾಜಿ ಸಂಸದರ ಪಿಂಚಣಿಯನ್ನು ಶೇ.75 ಹೆಚ್ಚಿಸುವಂತೆ ಸಂಸದೀಯ ಸಮಿತಿ ಶಿಫಾರಸು ಮಾಡಿದೆ.ಅದೇ ವೇಳೆ  ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಇರುವ ವೇತನ ಆಯೋಗದಂಥ ವ್ಯವಸ್ಥೆ ಸಂಸದರಿಗೂ ಇರಲಿ ಎಂದು ಸರಕಾರಕ್ಕೆ ಸಲ್ಲಿಸಿರುವ ಶಿಫಾರಸಿನಲ್ಲಿ ಸಂಸದೀಯ ಜಂಟಿ ಸಮಿತಿ ತಿಳಿಸಿದೆ.

ಹಿಂದೆ 2010ರಲ್ಲಿ ಸಂಸದರ ವೇತನ ಪರಿಷ್ಕರಣೆ ಆಗಿತ್ತು. ಸರ್ಕಾರಿ ನೌಕರರಂತೆ ಸಂಸದರಿಗೆ ತುಟ್ಟಿಭತ್ಯೆ ಇರುವುದಿಲ್ಲ ಎಂದಿರುವ ಸಮಿತಿ ಇದೀಗ ಒಟ್ಟು 60 ಶಿಫಾರಸುಗಳನ್ನು ಮುಂದಿಟ್ಟಿದೆ.

ಪ್ರಸ್ತುತ ಹಾಲಿ ಸಂಸದರ ತಿಂಗಳ ಸಂಬಳ ರು. 50,000, ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನೀಡುತ್ತಿರುವ ರು. 2000 ದಿನ ಭತ್ಯೆಯನ್ನೂ ಹೆಚ್ಚಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.

ವೇತನ ಪರಿಷ್ಕರಣೆ ಬಾಕಿ ಇದ್ದು, ಸಂಸದರನ್ನು ಭೇಟಿ ಆಗಲು ಬರುವ ಜನರಿಗೆ ಚಹಾ ನೀಡುವುದಕ್ಕಾಗಿ ರು. 1000 ಬೇಕಾಗುತ್ತದೆ. ನಮ್ಮನ್ನು ಭೇಟಿಯಾಗಲು ಬರುವ ಜನರಿಗೆ ಕನಿಷ್ಠ ಸೌಜನ್ಯ ತೋರದಿರಲು ಸಾಧ್ಯವೇ? ಎಂದು ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆ.

ಮಾಜಿ ಸಂಸದರಿಗೆ ವರ್ಷದಲ್ಲಿ 20-25 ಬಾರಿ ಉಚಿತ ವಿಮಾನ ಪ್ರಯಾಣ ಮಾಡಲು ಅನುವುಮಾಡಿಕೊಡಬೇಕು. ಅವರಿಗೆ ದೊರೆಯುತ್ತಿರುವ ಪಿಂಚಣಿಯನ್ನು ರು. 20,000 ದಿಂದ ರು.35,000ಕ್ಕೆ ಹೆಚ್ಚಿಸಬೇಕು ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯಾನಥ್‌ ನೇತೃತ್ವದ ಈ ಸಮಿತಿ ಶಿಫಾರಸು ಮಾಡಿದೆ.

ಸದ್ಯ ಸಂಸದರು ಹಾಗೂ ಅವರ ಸಂಗಾತಿ ರೈಲಿನಲ್ಲಿ ಉಚಿತವಾಗಿ ಮೊದಲ ದರ್ಜೆಯಲ್ಲಿ ಪ್ರಯಾಣಿಸಬಹುದಾಗಿದ್ದು, ಮತ್ತೊಬ್ಬ ಸಹಪ್ರಯಾಣಿಕರು (ಆಪ್ತಕಾರ್ಯದರ್ಶಿ)ಗೂ ಈ ಸೌಲಭ್ಯ ಲಭ್ಯವಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದಲ್ಲದೇ ಪಾಕೆಟ್‌ ಮನಿ ರೂಪದಲ್ಲಿ ಮೊದಲ ದರ್ಜೆಯ ರೈಲು ಟಿಕೆಟ್‌ ದರವನ್ನು ಸಂಸದರಿಗೆ ನೀಡಬೇಕು ಎಂಬ ಪ್ರಸ್ತಾವನೆಯನ್ನೂ ಮುಂದಿಟ್ಟಿದೆ. ಅದೇ ರೀತಿ ವಿಮಾನ ಪ್ರಯಾಣದ ವೇಳೆಯೂ ಒಂದು ಟಿಕೆಟ್‌ ದರದ ಮೊತ್ತವನ್ನು ಭತ್ಯೆಯಾಗಿ ನೀಡಬೇಕು ಎಂದು ಹೇಳಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಸಂಸದರಿಗೆ ವಿವಿಐಪಿ ಸೌಲಭ್ಯ ಬೇಕೆಂಬ ಬೇಡಿಕೆಯೂ ಇದೆ. ಜತೆಗೆ, ಕೇಂದ್ರ ಸರಕಾರದ ಆರೋಗ್ಯ ಯೋಜನೆಗಳು ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಲಭ್ಯವಾಗಬೇಕು ಎಂದು ಸಮಿತಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.