ಲಿಂಗ ಪತ್ತೆ ಜಾಹೀರಾತು ಪ್ರಕಟಿಸಬೇಡಿ: ಸುಪ್ರೀಂ
ಇನ್ನು ಮುಂದೆ ನಿಮ್ಮ ವೆಬ್‍ಸೈಟ್‍ನಲ್ಲಿ ಲಿಂಗ ಪತ್ತೆ ಬಗ್ಗೆ ಜಾಹೀರಾತನ್ನು ಹಾಕಬಾರದು ಎಂದು ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಕಂಪನಿಗಳಿಗೆ..

ನವದೆಹಲಿ: ಇನ್ನು ಮುಂದೆ ನಿಮ್ಮ ವೆಬ್‍ಸೈಟ್‍ನಲ್ಲಿ ಲಿಂಗ ಪತ್ತೆ ಬಗ್ಗೆ ಜಾಹೀರಾತನ್ನು ಹಾಕಬಾರದು ಎಂದು ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ.
ಈ ಬಗ್ಗೆ ಮಧ್ಯಂತರ ಆದೇಶ ನೀಡಿರುವ ಸುಪ್ರೀಂ, ಈ ಮೂರು ಅಂತರ್ಜಾಲ ಕಂಪನಿಗಳು ಭ್ರೂಣಲಿಂಗ ಪತ್ತೆ ಬಗ್ಗೆ ಜಾಹೀರಾತು ನೀಡುವುದಾಗಲೀ ಅಥವಾ ಇಂಥ ಜಾಹೀರಾತುಗಳಿಗೆ ಪ್ರಾಯೋಜಕತ್ವ ನೀಡುವುದಾಗಲೀ ಮಾಡುವಂತಿಲ್ಲ. ಒಮ್ಮೆ ಮಾಡಿದ್ದೇ ಆದಲ್ಲಿ ಅಂಥ ಕಂಪನಿಗಳ ವಿರುದ್ಧ ಪಿಸಿ-ಪಿಎನ್‍ಡಿಟಿ ಕಾಯ್ದೆಯ ಸೆಕ್ಷನ್ 22ರ ಅಡಿ ಕಾನೂನು ಉಲ್ಲಂಘನಾ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಹೀಗಾಗಿ ಈ ಕಾಯ್ದೆಯಡಿ ಕೂಡಲೇ ತನ್ನ ವೆಬ್‍ಸೈಟ್‍ಗಳಲ್ಲಿ ಹಾಕಲಾಗಿರುವ ಇಂಥ ಜಾಹೀರಾತುಗಳನ್ನು ತೆಗೆದುಹಾಕಬೇಕು. ಜತೆಗೆ ಈ ಕಾಯ್ದೆಯ ವಿವರ ಮತ್ತು ನಿಯಮಗಳನ್ನೊಳಗೊಂಡ ನಮ್ಮ ಆದೇಶವನ್ನು ನಿಮ್ಮ ಸೇವಾ ಪೂರೈಕೆ ವಿಭಾಗದಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


