ಸಂಸತ್‍ನಲ್ಲಿ ಅಣು ಒಪ್ಪಂದ ಮಾಹಿತಿಗೆ ಕಾಂಗ್ರೆಸ್ ಪಟ್ಟು
ಭಾರತ ಮತ್ತು ಅಮೆರಿಕ ನಡುವೆ ನಡೆದ ನಾಗರಿಕ ಪರಮಾಣು ಒಪ್ಪಂದದ ವಿಷಯವನ್ನು ಮುಂಬರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಶ್ನಿಸಲಿದೆ...

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ನಡೆದ ನಾಗರಿಕ ಪರಮಾಣು ಒಪ್ಪಂದದ ವಿಷಯವನ್ನು ಮುಂಬರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಶ್ನಿಸಲಿದೆ.
ಅಲ್ಲದೆ, ಏಳು ವರ್ಷಗಳ ಹಿಂದೆ ತಡೆಯಲ್ಪಟ್ಟಿದ್ದ ಈ ಒಪ್ಪಂದದ ಪರಿಹಾರಕ್ಕೆ ಕೊಟ್ಟ ಭರವಸೆ ಬಗ್ಗೆಯೂ ಮಾಹಿತಿ ನೀಡುವಂತೆ ಆಗ್ರಹಿಸಲಿದೆ. ಅಣು ವಿಷಯವಾಗಿ ಎರಡೂ ದೇಶಗಳ ಮಧ್ಯೆ ನಡೆದ ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರ ಅಸ್ಪಷ್ಟ ಮಾಹಿತಿ ನೀಡಿದೆ.
ಬರಾಕ್ ಭೇಟಿ ವೇಳೆ ಕೇವಲ ಒಪ್ಪಂದದ ಬಗ್ಗೆ ಘೋಷಣೆಯನ್ನಷ್ಟೇ ಮಾಡಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಪಟ್ಟುಹಿಡಿಯಲಿದೆ ಎಂದು ಮೂಲಗಳು ಹೇಳಿವೆ. ತಮ್ಮ ಪಕ್ಷ ಆಡಳಿತದಲ್ಲಿರುವಾಗಲೇ ಒಪ್ಪಂದದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗಾಗಿ ಕಾಂಗ್ರೆಸ್ ಈ ಒಪ್ಪಂದವನ್ನು ವಿರೋಧಿಸುವುದಿಲ್ಲ.
ಆದರೆ, ಆಗ ಇದನ್ನು ವಿರೋಧಿಸಿದ್ದ ಬಿಜೆಪಿಯು ಈಗ ಹೇಗೆ ಅಳವಡಿಸಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದಲ್ಲದೆ, ವಾಣಿಜ್ಯ ಘಟಕದ ಬಗ್ಗೆ ಆದ ಒಪ್ಪಂದ, ಹಣಕಾಸಿನ ಬಾಧ್ಯತೆಗಳ ಬಗ್ಗೆ ವಿಧಿಸಿರುವ ಷರತ್ತು ಹಾಗೂ ಪರಿಹಾರ ಭಾಗಗಳ ಬಗ್ಗೆ ಸಮರ್ಪಕ ಮಾಹಿತಿ ಬೇಕು. ಇದುವರೆಗೂ ನಮಗೆ ಈ ಬಗ್ಗೆ ಮಾಡಿಕೊಂಡ ಒಡಂಬಡಿಕೆಯ ಪ್ರತಿ ಕೈ ತಲುಪಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಸರ್ಕಾರ ಮಾಹಿತಿಯನ್ನು ಅಸ್ಪಷ್ಟವಾಗಿ ನೀಡಿದೆ. ಇವುಗಳ ಬಗ್ಗೆ ಯಾರಿಗೂ ತಿಳಿಸಿಲ್ಲವಾದ್ದರಿಂದ ಸಂಸತ್‍ನಲ್ಲಿ ಮಾಹಿತಿ ಬಹಿರಂಗಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


