ಭಾರತೀಯ ಹೂಡಿಕೆದಾರರಿಂದ ಅಮೆರಿಕಕ್ಕೆ ಲಾಭ: ಒಬಾಮಾ

ನವದೆಹಲಿ: ಭಾರತೀಯ ಹೂಡಿಕೆದಾರರಿಂದ ಅಮೆರಿಕಕ್ಕೆ ಲಾಭ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಹೇಳಿದ್ದಾರೆ.
ದೆಹಲಿಯ ತಾಜ್ ಪ್ಯಾಲೇಸ್‌ನ ದರ್ಬಾರ್ ಹಾಲ್‌ನಲ್ಲಿ ಭಾರತ-ಅಮೆರಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಒಬಾಮಾ, ಭಾರತೀಯ ಹೂಡಿಕೆದಾರರಿಂದಾಗಿ ಅಮೆರಿಕಕ್ಕೆ ಹೆಚ್ಚಿನ ಲಾಭ ಇದೆ. ವ್ಯಾಪಾರ ಹೆಚ್ಚಳದಿಂದ ಎರಡು ದೇಶಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದರು.
ನೂತನ ತಂತ್ರಜ್ಞಾನ ಭಾರತದ ಅಭಿವೃದ್ಧಿಗೆ ಪೂರಕವಾಗಿದ್ದು, ನೂತನ ತಂತ್ರಜ್ಞಾನ ಅಭಿವೃದ್ಧಿಗೆ ಅಮೆರಿಕ ಸಹಕಾರ ನೀಡುತ್ತದೆ ಎಂದು ಒಬಾಮಾ ಭರವಸೆ ನೀಡಿದರು.
ಭಾರತದಲ್ಲಿ ಮೂರು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅಮೆರಿಕ ನೆರವು ನೀಡುತ್ತದೆ. ಇದೇ ವೇಳೆ ಶೃಂಗಸಭೆ ಆಯೋಜಿಸಿದ ಭಾರತ ಸರ್ಕಾರಕ್ಕೆ ಅವರು ವಂದನೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜನರ ಜೀವನ ಮಟ್ಟು ಸುಧಾರಣೆಯಾಗುವ ವಿಶ್ವಾಸ ವ್ಯಕ್ತಪಡಿಸಿದ ಒಬಾಮಾ, ಮೋದಿ ಅವರ ಸ್ಪಚ್ಛತಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸ್ವತಃ ಪ್ರಧಾನಿಗಳೇ ಪೊರಕೆ ಹಿಡಿದು ಕಸಗುಡಿಸುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


