ಹಾಟ್‍ಲೈನ್ ಸ್ಥಾಪಿಸಲು ಒಪ್ಪಿಗೆ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ನರೇಂದ್ರ ಮೋದಿ ನಡುವೆ ಹಾಟ್‍ಲೈನ್ ಸ್ಥಾಪಿಸಲು ಉಭಯ...

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ನರೇಂದ್ರ ಮೋದಿ ನಡುವೆ ಹಾಟ್‍ಲೈನ್ ಸ್ಥಾಪಿಸಲು ಉಭಯ ದೇಶಗಳೂ ಒಪ್ಪಿಗೆ ಸೂಚಿಸಿವೆ. ನನ್ನ, ಬರಾಕ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಮಾತುಕತೆಗೆ ಹಾಟ್‍ಲೈನ್ ಸ್ಥಾಪಿಸಲಿದ್ದೇವೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ಪ್ರಕಟಿಸಿದ್ದಾರೆ.
ಅಮೆರಿಕ ಮತ್ತು ಭಾರತ ನಡುವೆ ಈ ರೀತಿಯ ಹಾಟ್‍ಲೈನ್ ವ್ಯವಸ್ಥೆ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. ಈ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಮೋದಿ, ಎರಡೂ ದೇಶಗಳ ನಡುವೆ ಪ್ರಮುಖ ಸಹಭಾಗಿತ್ವ ಸಾಧಿಸುವ ಪ್ರಕ್ರಿಯೆಯ ಭಾಗ ಎಂದು ಹೇಳಿದ್ದಾರೆ.
ನಾವು ಈ ಮಹತ್ವದ ಸಹಭಾಗಿತ್ವಕ್ಕೆ ಹೊಸ ಭಾಷ್ಯ ಮತ್ತು ಹೆಚ್ಚಿನ ಗಮನಕೊಡಲು ಹಾಟ್‍ಲೈನ್ ಸ್ಥಾಪಿಸಿದ್ದೇವೆ. ಜತೆಗೆ, ಭಾರತ ಮತ್ತು ಅಮೆರಿಕ ನಡುವೆ ನಿಯಮಿತವಾಗಿ ಶೃಂಗಗಳು ನಡೆಯಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


