ಬೆಂಗಳೂರಿಗೆ ದಕ್ಕಿತು ಡ್ರೋಣ್ ನಿರ್ಮಾಣ
ರಕ್ಷಣಾ ಕ್ಷೇತ್ರದಲ್ಲಿ ಅಭೂತ ಪೂರ್ವ ಒಪ್ಪಂದಕ್ಕೆ ಕೊನೆಗೂ ಸಹಿ ಬಿದ್ದಿದೆ. ಮುಂದಿನ 10 ವರ್ಷಗಳ ರಕ್ಷಣಾ...

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಅಭೂತ ಪೂರ್ವ ಒಪ್ಪಂದಕ್ಕೆ ಕೊನೆಗೂ ಸಹಿ ಬಿದ್ದಿದೆ. ಮುಂದಿನ 10 ವರ್ಷಗಳ ರಕ್ಷಣಾ ಸಹಕಾರ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಒಪ್ಪಿಕೊಂಡಿದೆ.
ಈ ಮೂಲಕ ರಾವೆನ್ ಡ್ರೋಣ್ ತಯಾರಿಸುವ ಬೆಂಗಳೂರಿನ ಕನಸು ನನಸಾದಂತಾಗಿದೆ. ಮುಂದಿನ ತಲೆಮಾರಿನ ರಾವೆನ್ ಮಿನಿ ಯುಎವಿಗಳು ಮತ್ತು ಸಿ-130 ಸೇನಾ ಸಾರಿಗೆ ವಿಮಾನಕ್ಕೆ ವಿಶೇಷ ಕಿಟ್‍ಗಳನ್ನು ಉತ್ಪಾದಿಸುವ ಮತ್ತು ಅಬಿsವೃದಿಟಛಿಪಡಿಸುವ 4 ಪ್ರಮುಖ ಯೋಜನೆಗಳಿಗೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಜೆಟ್ ಎಂಜಿನ್ ತಂತ್ರಜ್ಞಾನದ ವಿನ್ಯಾಸ ಮತ್ತು ಅಭಿವೃದ್ಧಿಯ ಜೊತೆಗೆ ವಿಮಾನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕಾರ್ಯಕಾರಿ ತಂಡವೊಂದನ್ನು ರಚಿಸಲೂ ಒಪ್ಪಿಗೆ ನೀಡಲಾಗಿದೆ.
ಹೈದರಾಬಾದ್ ಹೌಸ್‍ನಲ್ಲಿ ನಡೆದ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವಿಂದು ರಕ್ಷಣಾ ಸಹಕಾರವನ್ನು ಹೊಸ ಮಟ್ಟಕ್ಕೇರಿಸಿದ್ದೇವೆ. ಸುಧಾರಿತ ರಕ್ಷಣಾ ಯೋಜನೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಎರಡೂ ರಾಷ್ಟ್ರಗಳು ಜಂಟಿಯಾಗಿ ನಡೆಸಲಿವೆ. ಇದು ದೇಶೀಯ ರಕ್ಷಣಾ, ಉತ್ಪಾದನಾ ಕ್ಷೇತ್ರವನ್ನು ಮೇಲ್ದರ್ಜೆಗೇರಿ ಸಲು ನೆರವಾಗಲಿದೆ ಎಂದರು.
ಮೂಲಗಳ ಪ್ರಕಾರ, ಈ ಯೋಜನೆಯಂತೆ ಡ್ರೋಣ್ ತಯಾರಿಸುವ ಅವಕಾಶ ಬೆಂಗಳೂರಿಗೆ ಲಭ್ಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


