ಮಹತ್ವದ ನಿರ್ಧಾರಗಳ ಅನುಷ್ಠಾನ: ಜೇಟ್ಲಿ
ವಿದೇಶಿ ಬಂಡವಾಳ ಹೂಡಿಕೆ, ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ...

ದಾವೋಸ್: ವಿದೇಶಿ ಬಂಡವಾಳ ಹೂಡಿಕೆ, ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು, ನೀತಿ ನಿರೂಪಣೆಯಲ್ಲಿ ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದೆ. ಹಾಗಾಗಿ ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್ ಘೋಷಣೆಗಿಂತಲೂ ಈ ಕ್ರಮಗಳು ಹೆಚ್ಚು ಮಹತ್ವದ್ದು ಎಂದು ಹಣಕಾಸು ಸಚಿವ ಅರುಣ್‌ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ನಮ್ಮ ಸರ್ಕಾರದ ಪಾಲಿಗೆ ಮಹತ್ವದ ಗಳಿಗೆ. ಅದೇ ರೀತಿ ಮುಂದಿನ 364 ದಿನಗಳೂ ಸರ್ಕಾರದ ಪಾಲಿಗೆ ಅಷ್ಟೇ ಮುಖ್ಯ. ಈ ರೀತಿ ಹೇಳು ಮೂಲಕ ನಾನು ಬಜೆಟ್ ಬಗ್ಗೆ ಜನ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಹುಸಿ ಮಾಡುತ್ತಿಲ್ಲ.
ರೈಲ್ವೆ, ರಕ್ಷಣಾ ಕ್ಷೇತ್ರಗಳನ್ನು ವಿದೇಶಿ ಬಂಡವಾಳ ಹೂಡಿಕೆಗೆ ತೆರೆಯುವಂತೆ ಮಾಡುವುದು ಸಣ್ಣ ಮಾತಲ್ಲ, ಜಿಎಸ್‌ಟಿ ಅನುಷ್ಠಾನಕ್ಕೆ ಮುಂದಾಗುವುದು, ಅದಿರು ಕ್ಷೇತ್ರ, ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿ ತೆಗೆದುಕೊಂಡ ಉಪಕ್ರಮಗಳು ಸಾಮಾನ್ಯವಾದುದೇನಲ್ಲ. ನಮ್ಮ ಹಿಂದಿನ ಸರ್ಕಾರಗಳು ಈ ವಿಚಾರದಲ್ಲಿ ವಿಫಲವಾಗಿತ್ತು. ಆದರೆ, ನಾವು ದೇಶದ ಆರ್ಥಿಕ ಬೆಳವಣಿಗೆಯ ದೃಷ್ಠಿಯಿಂದ ಇದನ್ನೆಲ್ಲ ಬಜೆಟ್‌ಗೆ ಮೊದಲೇ ಮಾಡಿ ತೋರಿಸಿದ್ದೇವೆ ಎಂದಿದ್ದಾರೆ ಜೇಟ್ಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


