ದೇಶ

ಲಖ್ವಿಯನ್ನು ಭಾರತಕ್ಕೆ ಕೊಡಿ: ಅಮೆರಿಕ, ಬ್ರಿಟನ್

2008ರ ಮುಂಬೈ ಸ್ಫೋಟದ ಪ್ರಮುಖ ರೂವಾರಿ ಝಕೀವುರ್ ರೆಹಮಾನ್ ಲಖ್ವಿಯನ್ನು ಹೆಚ್ಚಿನ ವಿಚಾರಣೆಗಾಗಿ ಭಾರತಕ್ಕೆ...

ಲಖ್ವಿಯನ್ನು ಭಾರತಕ್ಕೆ ಕೊಡಿ: ಅಮೆರಿಕ, ಬ್ರಿಟನ್
ಝಕೀವುರ್ ರೆಹಮಾನ್ ಲಖ್ವಿ
Published On :

ಇಸ್ಲಾಮಾಬಾದ್:  2008ರ ಮುಂಬೈ ಸ್ಫೋಟದ ಪ್ರಮುಖ ರೂವಾರಿ ಝಕೀವುರ್ ರೆಹಮಾನ್ ಲಖ್ವಿಯನ್ನು ಹೆಚ್ಚಿನ ವಿಚಾರಣೆಗಾಗಿ ಭಾರತಕ್ಕೆ ಒಪ್ಪಿಸಿ ಎಂದು ಅಮೆರಿಕ ಮತ್ತು ಬ್ರಿಟನ್ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

ಇದರಿಂದ ಎರಡು ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಸಂಬಂಧಗಳೂ ವೃದ್ಧಿಸುವುದಲ್ಲದೆ, ಭಾರತಕ್ಕೂ ಸ್ವತಂತ್ರ ವಿಚಾರಣೆ ನಡೆಸಲು ಅನುಕೂಲವಾಗಲಿದೆ ಎಂದು ಪಾಕ್‌ಗೆ ಸಲಹೆ ನೀಡಿದೆ. ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಸೋಮವಾರ ವಾದ ಮಂಡಿಸಿದ ಪಾಕ್ ಸರ್ಕಾ ವಕೀಲ, ಮುಂಬೈ ಸ್ಫೋಟ ರೂವಾರಿ ಲಖ್ವಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಎರಡು ದೇಶಗಳು ಬೇಡಿಕೆ ಇಟ್ಟಿವೆ ಎಂದು ಹೇಳಿದ್ದಾರೆ. ಆದರೆ, ಆ ಎರಡು ದೇಶ ಯಾವುದು ಎಂಬ ಬಗ್ಗೆ ಮಾತ್ರ ಗುಟ್ಟು ಬಿಟ್ಟುಕೊಡಲಿಲ್ಲ.

2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ಭಾರತೀಯರು ಸೇರಿದಂತೆ ಹಲವಾರು ದೇಶಗಳ ಜನತೆಯೂ ಸಾವನ್ನಪ್ಪಿದ್ದಾರೆ. ಲಖ್ವಿಯನ್ನು ಹಸ್ತಾಂತರಿಸಿದರೆ, ಭಾರತಕ್ಕೆ ಸ್ವತಂತ್ರವಾಗಿ  ವಿಚಾರಣೆ ನಡೆಸಲು ಅನುಕೂಲವಾಗುವುದರ ಜತೆಗೆ ಎರಡೂ ದೇಶಗಳ ಬಾಂಧವ್ಯ ವೃದ್ಧಿಗೂ ಒಳ್ಳೆಯದು ಎಂಬ ಸಲಹೆಯನ್ನು ನೀಡಿವೆ ಎಂದು ಪಾಕ್‌ನ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.