ಚೀನಾಗೆ ಭಾರತ ನೀಡಿದ ಆಘಾತವೇ?
ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಪರೋಕ್ಷವಾಗಿ ಚೀನಾಗೆ ಭಾರತ ನೀಡಿದ ಆಘಾತ ಎಂದು...

ಕೊಲಂಬೋ: ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಪರೋಕ್ಷವಾಗಿ ಚೀನಾಗೆ ಭಾರತ ನೀಡಿದ ಆಘಾತ ಎಂದು ಹೇಳಲಾಗುತ್ತಿದೆ.
ದ್ವೀಪರಾಷ್ಟ್ರದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಎಲ್‌ಟಿಟಿಇಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ಕೀರ್ತಿ ಬೆನ್ನಿಗಿಟ್ಟುಕೊಂಡು ಸತತ ಎರಡು ಬಾರಿ ಗೆದ್ದು ಮೂರನೇ ಬಾರಿಯೂ ಅಧಿಕಾರಕ್ಕೇರುವ ಕನಸು ಕಂಡಿದ್ದ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಸೋತಿದ್ದೆಲ್ಲಿ?
ಬಹುಶಃ ಮೂರನೇ ಬಾರಿ ನೀವು ಅಧ್ಯಕ್ಷರಾಗಿಯೇ ತೀರುತ್ತೀರಿ ಎಂದು ಭವಿಷ್ಯ ನುಡಿದಿದ್ದ ಮಾಜಿ ಅಧ್ಯಕ್ಷರ ಆಪ್ತ ಜ್ಯೋತಿಷಿಯೂ ರಾಜಪಕ್ಸೆ ಸೋಲುತ್ತಾರೆಂದು ನಿರೀಕ್ಷಿಸಿರಲಿಲ್ಲ. ಸ್ವತಃ ಈ ಸೋಲಿನ ಆಘಾತವನ್ನು ರಾಜಪಕ್ಸೆ ಅವರಿಗೇ ಅರಗಿಸಿಕೊಳ್ಳಲಾಗುತ್ತಿಲ್ಲ. ಇಡೀ ಸರ್ಕಾರ, ಆಡಳಿತವನ್ನೇ ಅವರು ತನ್ನ ಸಂಬಂಧಿಕರ ನಿಯಂತ್ರಣದಲ್ಲಿಟ್ಟುಕೊಂಡಿದ್ದರು.
ಆದರೆ ತನ್ನವರೆಂದುಕೊಂಡವರೇ ಪ್ರತಿಪಕ್ಷದವರ ಜತೆಗೆ ಸೇರಿಕೊಂಡು ಇಷ್ಟೊಂದು ದೊಡ್ಡ ಷಡ್ಯಂತ್ರ ಹೆಣೆದಿದ್ದ ವಿಚಾರ ಬಹಿರಂಗವಾದದ್ದು ಚುನಾವಣೆ ಫಲಿತಾಂಶ ಪ್ರಕಟವಾದಾಗಲೆ. ಶ್ರೀಲಂಕಾದ ಪತ್ರಿಕೆಗಳ ಪ್ರಕಾರ ಚೀನಾದ ಪರಮಾಪ್ತನಾಗಿದ್ದ ರಾಜಪಕ್ಸೆಯ ಸೋಲು ಭಾರತದ್ದೇ ಆಟ. ಈ ಆರೋಪದ ಕುರಿತು ಭಾರತವಾಗಲಿ, ಶ್ರೀಲಂಕಾದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರವಾಗಲಿ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಶ್ರೀಲಂಕಾದಲ್ಲಿದ್ದ 'ರಾ' ಅಧಿಕಾರಿಯನ್ನು ಮಾತ್ರ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


