ಭಾರತದ ಅಸಮಾಧಾನಕ್ಕೆ ಕಾರಣವಾದ 'ಸಬ್‌ಮೆರಿನ್'
ಚೀನಾದ ಸಬ್‌ಮೆರಿನ್‌ಗೆ ಶ್ರೀಲಂಕಾ ಸರ್ಕಾರ ಜಾಗ ಒದಗಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು...

ನವದೆಹಲಿ: ಚೀನಾದ ಸಬ್‌ಮೆರಿನ್‌ಗೆ ಶ್ರೀಲಂಕಾ ಸರ್ಕಾರ ಜಾಗ ಒದಗಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು.
2005ರಲ್ಲಿ ಅಧಿಕಾರಕ್ಕೇರಿದ ಮಹಿಂದಾ ರಾಜಪಕ್ಸೆ ಎಲ್‌ಟಿಟಿಇ ವಿರೋಧಿ ಎನ್ನುವುದು ಎಲ್ಲರಿಗೂ ಗೊತಿತ್ತು. ಆದರೆ ಅವರು ಮುಂದೆ ಹೋಗಿ ಭಾರತ ವಿರೋಧಿ ನಿಲುವು ತಳೆದಿದ್ದು ನೆರೆಯ ದೇಶವನ್ನು ಇರುಸುಮುರುಸುಗೆ ಗುರಿಯಾಗಿಸಿತ್ತು. ರಾಜಪಕ್ಸೆ 2 ವರ್ಷದ ಅಧಿಕಾರಾವಧಿಯಲ್ಲಿ ಏಳು ಬಾರಿ ಚೀನಾಗೆ ಹೋಗಿ ಬಂದಿದ್ದರು. ಎಲ್‌ಟಿಟಿಇ ಮಟ್ಟಹಾಕುವಲ್ಲಿ ಚೀನಾದ ನೆರವು ಪಡೆದರು.
ಅಭಿವೃದ್ದಿಯಲ್ಲೂ ನೆರೆಯ ಭಾರತವನ್ನು ಬದಿಗಿಟ್ಟು ಚೀನಾವನ್ನು ಹತ್ತಿರ ಕರೆದರು. ಈ ವಿಚಾರ ಭಾರತಕ್ಕೆ ಸ್ವಲ್ಪಮಟ್ಟಿಗಿನ ತಲೆನೋವು ತಂದಿಟ್ಟಿದ್ದರೂ ಆತಂಕಪಡುವಂಥದ್ದೇನೂ ಇರಲಿಲ್ಲ. ಆದರೆ, ನಿಜವಾದ ಆತಂಕ ಶುರುವಾದದ್ದು ಚೀನಾದ ಜಲಾಂತರ್ಗಾಮಿಗಳಿಂದ. ಯಾವಾಗ ಚೀನಾದ ಜಲಾಂತರ್ಗಾಮಿಗಳಿಗೆ ಶ್ರೀಲಂಕಾ ನೆಲೆ ಒದಗಿಸಿತೋ ಆಗಲೇ ಭಾರತಕ್ಕೆ ಆತಂಕ ಶುರುವಾಗಿದ್ದು, ನೆರೆಯ ರಾಷ್ಟ್ರದ ಅಭಿಪ್ರಾಯವನ್ನೂ ಕೇಳದೆ ರಾಜಪಕ್ಸೆ ಈ ರೀತಿಯ ಆಟವಾಡಿದ್ದು ಭಾರತವನ್ನು ತೀವ್ರವಾಗಿ ಕೆರಳಿಸಿತು. ಈ ವಿಚಾರವಾಗಿ ಪ್ರಧಾನಿ ಮೋದಿ ಅವರು ರಾಜಪಕ್ಸೆ ಅವರಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದರು.
ಆದರೆ, ರಾಜಪಕ್ಸೆ ಅಷ್ಟೊತ್ತಿಗಾಗಲೇ ಚೀನಾದ ಆಟದ ಗೊಂಬೆಯಾಗಿ ಬಿಟ್ಟಿದ್ದರು. ಮೂಲಗಳ ಪ್ರಕಾರ ಈ ವೇಳೆಯಲ್ಲೇ ಭಾರತ ಶ್ರೀಲಂಕಾದ ರಾಜಕೀಯದಲ್ಲಿ ಹೆಚ್ಚು ಕುತೂಹಲ ಬೆಳೆಸಿಕೊಂಡದ್ದು, ಪ್ರತಿಪಕ್ಷಗಳ ಬೆನ್ನಿಗೆ ನಿಂತದ್ದು. ಶ್ರೀಲಂಕಾದ ಮಾಧ್ಯಮದ ವರದಿಯನ್ನೇ ನಂಬುವುದಾದರೆ ರಾಜಪಕ್ಸೆಯನ್ನು ಮಣಿಸುವಲ್ಲಿ 'ರಾ' ದ ಅಧಿಕಾರಿ. ಶ್ರೀಲಂಕಾದಲ್ಲಿ ಒಳಗೊಳಗೆ ನಡೆಯುತ್ತಿದ್ದ ಈ ರಾಜಕೀಯ ಬದಲಾವಣೆಯನ್ನು ಅರಿತುಕೊಳ್ಳುವಲ್ಲಿ ವಿಳಂಬ ಮಾಡಿದಕ್ಕೇ ಚೀನಾ ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಮೈತ್ರಿಪಾಲ ಸಿರಿಸೇನೆ ನೇತೃತ್ವದ ಪ್ರತಿಪಕ್ಷ ಶ್ರೀಲಂಕಾವನ್ನು ಮತ್ತೊಂದು ವಸಾಹತು (ಚೀನಾದ ಕಾಲನಿ) ಮಾಡಲು ಬಿಡಲ್ಲ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಾಗಲೇ ಚೀನಾ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಪರಿಣಾಮ ಸಿರಿಸೇನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚೀನಾವಿರೋಧಿ ನಿಲುವು ತಳೆಯುವ ಸ್ಪಷ್ಟ ಸೂಚನೆಯನ್ನೂ ಅವರು ಈಗಾಗಲೇ ತಳೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


