'ಆಪ್ ಖತಂ ಹೋಗಯೇ' ಎನ್ನುತ್ತಾ ತಾವೇ ಖತಂ ಆದರೇ ಸುನಂದಾ?
ಆಪ್ ಖತಂ ಹೋಗಯೇ ಎಂದು ಹೇಳಿದ್ದೇ ಸುನಂದಾ ಪುಷ್ಕರ್ ಅವರ ಸಾವಿಗೆ ಕಾರಣವಾಯ್ತೆ?

ನವದೆಹಲಿ: ಆಪ್ ಖತಂ ಹೋಗಯೇ ಎಂದು ಹೇಳಿದ್ದೇ ಸುನಂದಾ ಪುಷ್ಕರ್ ಅವರ ಸಾವಿಗೆ ಕಾರಣವಾಯ್ತೆ?
ಹೀಗೊಂದು ಮಹತ್ವದ ಸುಳಿವು ಇದೀಗ ದೆಹಲಿ ಪೊಲೀಸರಿಗೆ ಲಭ್ಯವಾಗಿದೆ. ಸುನಂದಾ ಸಾವಿಗೆ ಮುಂಚೆ ಸುನೀಲ್ ಸಾಹಿಬ್ ಎಂಬ ವ್ಯಕ್ತಿ ಆಕೆಯನ್ನು ಭೇಟಿಯಾಗಿದ್ದು, ಆತನ ಮೊಬೈಲ್ ಮೂಲಕ ಟ್ವೀಟ್ ಮಾಡಲು ಹಾಗೂ ತರೂರ್ ಗೆ ಕರೆ ಮಾಡಲು ಸಹಾಯ ಮಾಡಿದ್ದ ಎಂಬ ಮಾಹಿತಿಯನ್ನು ಶಶಿತರೂರ್ ಮನೆಗೆಲಸದ ಆಳು ನಾರಾಯಣ ಸಿಂಗ್ ಎಂಬಾತ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ನವೆಂಬರ್ ನಲ್ಲಿ ನಾರಾಯಣ್ನನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ಅಂಶವನ್ನು ಆತ ಬಾಯ್ಬಿಟ್ಟಿದ್ದಾನೆ. ಎಂಬ ಅಂಶ ಇದೀಗ ಬಹಿರಂಗವಾಗಿದ್ದು, ಆತ ಸುನೀಲ್ ಎಂಬ ವ್ಯಕ್ತಿಯನ್ನು ಮಾತ್ರ ಗುರುತಿಸಿದ್ದಾನೆ ಎನ್ನಲಾಗಿದೆ. ಸುನೀಲ್ 2014ರ ಜ.15ರಂದು ಲೀಲಾ ಪ್ಯಾಲೆಸ್ ಹೊಟೆಲ್ ಗೆ ಸುನಂದಾ ಜತೆ ಹೋಗಿದ್ದ. ಜತಗೆ ಆತನ ಮೊಬೈಲ್ ನಿಂದ ಟ್ವೀಟ್ ಮಾಡಿದ್ದ ಸುನಂದಾ, ಕೆಲವು ಮಾಹಿತಿಗಳನ್ನೂ ನಕಲು ಮಾಡಿಕೊಂಡಿದ್ದರು. ಇದೇ ವೇಳೆ ತರೂರ್ಗೆ ಕರೆ ಮಾಡಿದ್ದ ಪುಷ್ಕರ್, 'ಆಪ್ ಖತಂ ಹೋಗಯೇ' (ನಿಮ್ಮ ಕಥೆ ಇಲ್ಲಿಗೆ ಮುಗಿಯಿತು) ಎಂದು ಹೆದರಿಸಿದ್ದರು ಎಂದು ಆತ ಹೇಳಿದ್ದಾನೆ.
ಅಲ್ಲದೇ ಶಶಿತರೂರ್ರ ಟ್ವೀಟ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದಲ್ಲದೆ, ಪಾಕಿಸ್ತಾನ ಪತ್ರಕರ್ತೆ ಮೆಹರ್ ತರಾರ್ ಗೆ ತಮ್ಮ ವೈವಾಹಿಕ ಜೀವನದಲ್ಲಿ ಅಡ್ಡ ಬರುತ್ತಿದ್ದಾಳೆಂದು ಆರೋಪಿಸಿದ್ದರು. ಇದಲ್ಲದೆ, ಕೊಠಡಿಯಲ್ಲಿ ತರೂರ್ ಹಾಗೂ ಪುಷ್ಕರ್ ನಡುವೆ ಜಗಳವಾಗಿ ಹೊಡೆದಾಡಿಕೊಂಡಿದ್ದು, ಸುನಂದಾ ಹೊಡೆದ ಏಟಿಗೆ ತರೂರ್ ಕಾಲಿಗೆ ಪೆಟ್ಟಾಗಿತ್ತು ಎಂದೂ ನಾರಾಯಣ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


