ದೇಶ

ಹಿಂದೂ ಮಹಿಳೆಯರು ಕನಿಷ್ಟ 4 ಮಕ್ಕಳನ್ನು ಹೆರಬೇಕು : ಸಾಕ್ಷಿ ಮಹಾರಾಜ್

ಹಿಂದೂ ಮಹಿಳೆಯರು ಕನಿಷ್ಟ ಪಕ್ಷ ನಾಲ್ಕು ಮಕ್ಕಳನ್ನಾದರೂ ಹೊಂದಿರಬೇಕು ಎಂದು ಹೇಳುವ ಮೂಲಕ...

ಹಿಂದೂ ಮಹಿಳೆಯರು ಕನಿಷ್ಟ 4 ಮಕ್ಕಳನ್ನು ಹೆರಬೇಕು : ಸಾಕ್ಷಿ ಮಹಾರಾಜ್
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
Published On :

ನವದೆಹಲಿ: ಹಿಂದೂ ಮಹಿಳೆಯರು ಕನಿಷ್ಟ ಪಕ್ಷ ನಾಲ್ಕು ಮಕ್ಕಳನ್ನಾದರೂ ಹೊಂದಿರಬೇಕು ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

ಈ ಬಗ್ಗೆ ಮೀರತ್‌ನಲ್ಲಿ ನಡೆಯುತ್ತಿರುವ ಎರಡನೇ ಸಂತ ಸಮಾಗಮ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. 'ಹಿಂದೂ ಮಹಿಳೆಯರು ಕನಿಷ್ಟ ಪಕ್ಷ 4 ಮಕ್ಕಳನ್ನು ಹೊಂದಿರಬೇಕು. 1 ಮಗುವನ್ನು ನಮಗೆ ನೀಡಿ, ಮತ್ತೊಂದು ಮಗುವನ್ನು ದೇಶದ ಗಡಿ ಕಾಯಲು ಬಿಡಬೇಕು' ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಇದೇ ವೇಳೆ ಮರುಮತಾಂತರ ಕುರಿತು ಮಾತನಾಡಿರುವ ಅವರು, 'ಮರುಮತಾಂತರ ಆಗುವುದರಲ್ಲಿ ಯಾವ ತಪ್ಪು ಇಲ್ಲ. ಇದೊಂದು ಉತ್ತಮ ಕೆಲಸವಾಗಿದೆ. ನಾನು ಹಾಗೂ ಪಕ್ಷದ ಎಲ್ಲ ಸಂಸದರು ಮರುಮತಾಂತರದ ಪರವಾಗಿದ್ದು, ಈ ಕುರಿತಂತೆ ವಿಶೇಷ ಕಾನೂನು ಜಾರಿಯಾಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ ರಾಷ್ಟ್ರಪಿತ ಮಹಾತ್ಮಾಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ಓರ್ವ ಮಹಾನ್ ದೇಶಭಕ್ತ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದು ಸಾಕ್ಷಿ ಮಹಾರಾಜ್, ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿದ್ದರು. ಇದೀಗ ಮತ್ತೆ ಹೊಸ ಹೇಳಿಕೆಯ ಮೂಲಕ ವಿವಾದಕ್ಕೀಡಾಗಿದ್ದಾರೆ.

ಬಿಜೆಪಿಯ ಹಲವು ಸಂಸದರು ವಿವಾದಾತ್ಮಕ ಹೇಳಿಕೆ ನೀಡಿ ಪ್ರಧಾನಿ ಮೋದಿಯವರನ್ನು ಮುಜುಗರಕ್ಕೀಡು ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ಸಂಸದೀಯ ಮಂಡಳಿ ಸಭೆಯ ವೇಳೆ ಪಕ್ಷದ ಸಂಸದರಿಗೆ ಸಾರ್ವಜನಿಕವಾಗಿ ಹೇಳಿಕೆ ಕೊಡುವ ಮುನ್ನಾ ಒಮ್ಮೆ ಯೋಚಿಸಿ ಮಾತನಾಡಬೇಕು, ಅನಗತ್ಯವಾಗಿ ವಿವಾದಾತ್ಮಕ ಹೇಳಿಕೆಯನ್ನು ನೀಡಬೇಡಿ ಎಂದು ಸಂಸದರ ಕಿವಿ ಹಿಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.