ದೇಶ

ಮೇಕ್ ಇನ್ ಕರ್ನಾಟಕ

ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಮಾದರಿಯಲ್ಲಿ ಮುಖ್ಯಮಂತ್ರಿ...

ಮೇಕ್ ಇನ್ ಕರ್ನಾಟಕ
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಜತೆ ಸಿಎಂ ಸಿದ್ದರಾಮಯ್ಯ.
Published On :

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಮೇಕ್ ಇನ್ ಕರ್ನಾಟಕ'ದ ಪ್ರಸ್ತಾಪ ಮಾಡಿದ್ದಾರೆ.

ನಗರದ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ 'ಮೇಕ್ ಇನ್ ಕರ್ನಾಟಕ'ದ ಬಗ್ಗೆ ಮಾತನಾಡಿದ್ದಾರೆ. ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ, ಆ ಮೂಲಕ ಮೇಕ್ ಇನ್ ಕರ್ನಾಟಕ ಮಾಡಬೇಕು. ಅದು ಮುಂದೆ ಮೇಕ್ ಇನ್ ಇಂಡಿಯಾ ಸಾಧಿಸುವುದಕ್ಕೂ ನೆರವಾಗಲಿದೆ ಎಂಬ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಹೇಳಿದ್ದೇನು?


  • ಎಲ್ಲ ರೀತಿಯ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುವ ಬದಲು ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಬೇಕು.
  • ಸ್ಥಳೀಯವಾಗಿ ಅಭಿವೃದ್ಧಿಗೊಳಿಸುವ ಸಾಕಷ್ಟು ಮಾರ್ಗ, ಸಂಪನ್ಮೂಲ ನಮ್ಮಲ್ಲಿವೆ.
  • ಪರಿಣಾಮಕಾರಿಯಾಗಿ ಇ-ಆಡಳಿತ ಬಳಸಿ, ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ.
  • ಸೌರಶಕ್ತಿ ಬಳಕೆಗೆ ಆದ್ಯತೆ, ಕಸದಿಂದ ಇಂಧನ ಉತ್ಪಾದನೆ ಮಾಡಬೇಕು.
  • ತ್ಯಾಜ್ಯ ನೀರಿನಿಂದ ವಿದ್ಯುತ್, ಕಟ್ಟಡ ಅವಶೇಷಗಳಿಂದ ವಿವಿಧ ಉತ್ಪನ್ನ ತಯಾರಿಕೆ.
  • ಆಧುನಿಕ ತಂತ್ರಜ್ಞಾನಗಳ ವಿವಿಧ ರೀತಿಯ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಆದ್ಯತೆ.
  • ನ್ಯಾನೋ ತಂತ್ರಜ್ಞಾನದಿಂದ ರೇಷ್ಮೆ ತ್ಯಾಜ್ಯ ಮರುಬಳಕೆ.
  • ಪ್ಲಾಸ್ಟಿಕ್, ಪೇಪರ್ ಮತ್ತು ಸೆರಾಮಿಕ್‌ಗಳನ್ನು ಪುನರ್ ಬಳಸುವುದು.
  • ಆಹಾರ ಸಂಸ್ಕರಿಸಿ, ಸದ್ಬಳಕೆ ಮಾಡಿಕೊಳ್ಳುವಂಥ ತಂತ್ರಜ್ಞಾನದ ಮೊರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.