ಬೆಂಗಳೂರು ದರ್ಶಿನಿ
ಪ್ರವಾಸಿಗರ ಹಾಗೂ ಸಾರ್ವಜನಿಕರ...

ಬೆಂಗಳೂರು: ಪ್ರವಾಸಿಗರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 'ಬೆಂಗಳೂರು ದರ್ಶಿನಿ' ಎಂಬ ನೂತನ ಸೇವೆ ಆರಂಭಿಸಲಿದೆ. ಅಲ್ಲದೆ, ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡೆರಹಿತ ವಾಯುವಜ್ರ ಸೇವೆಯನ್ನು ಪ್ರಾರಂಭಿಸಲಿದೆ. ಇದೇ ಜ.7ರಿಂದ ಈ ಸೇವೆಗಳು ಆರಂಭವಾಗಲಿವೆ.
ನಗರ ದರ್ಶನಕ್ಕಾಗಿ 'ಬೆಂಗಳೂರು ದರ್ಶಿನಿ' ಆರಂಭಿಸುವ ಉದ್ದೇಶದಿಂದ ಈ ಹಿಂದಿದ್ದ 'ಹಾಫ್-ಆನ್-ಹಾಫ್-ಹಾಫ್' (ನಗರ ಪ್ರದಕ್ಷಿಣೆಯ 7 ಬಸ್) ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಗಳು, 'ಬೆಂಗಳೂರು ದರ್ಶಿನಿ' ಎಂಬ ಹೆಸರಡಿ ಎರಡು ಹವಾನಿಯಂತ್ರಿತ ವಾಹನ ಕಾರ್ಯಾಚರಣೆ ನಡೆಸುತ್ತದೆ. ಈ ಬಸ್‌ಗಳು ಮೆಜೆಸ್ಟಿಕ್‌ನಿಂದ ಹೊರಟು ಪ್ರವಾಸಿಗರನ್ನು ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ದು ಮತ್ತದೇ ಸ್ಥಳಕ್ಕೆ ತಂದು ಬಿಡುತ್ತವೆ. ಒಂದೇ ವಾಹನದಲ್ಲಿ ವೀಕ್ಷಿಸಬಹುದು. ಈ ಬಸ್‌ಗಳಲ್ಲಿ ಪ್ರಯಾಣಿಸುವ ವಯಸ್ಕರಿಗೆ 400, ಮಕ್ಕಳಿಗೆ 300 ಪ್ರಯಾಣ ದರ ನಿಗದಿಗೊಳಿಸಲಾಗಿದೆ. ಈ ಸೇವೆಯ ಮುಂಗಡ ಟಿಕೆಟ್ ಅನ್ನು ಕಾಯ್ದಿರಿಸುವ ಸೌಲಭ್ಯವನ್ನು ನೀಡಲಾಗಿದೆ ಎಂದರು.
ಬಸ್ ಮಾರ್ಗ: ಬೆಂಗಳೂರು ದರ್ಶಿನಿ-1:
ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 8.45ಕ್ಕೆ ಪ್ರಾರಂಭವಾಗಿ ನಗರದ ಪ್ರಮುಖ ಪ್ರವಾಸಿ ಸ್ಥಳಗಳಾದ ಟಿಪ್ಪು ಅರಮನೆ, ದೊಡ್ಡಬಸವಣ್ಣ ದೇವಸ್ಥಾನ, ಗವಿಗಂಗಾಧರೇಶ್ವ ದೇವಸ್ಥಾನ, ಬನಶಂಕರಿ ದೇವಸ್ಥಾನ, ಲಾಲ್‌ಬಾಗ್, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಕಬ್ಬನ್‌ಪಾರ್ಕ್, ವಿಧಾನಸೌಧ, ಜವಹರಲಾಲ್ ನೆಹರು ತಾರಾಲಯ, ಇಂದಿರಾಗಾಂಧಿ ಸಂಗೀತ ಕಾರಂಜಿ, ಇಸ್ಕಾನ್, ಪ್ರಸನ್ನ ಆಂಜನೆಯ ದೇವಸ್ಥಾನದ ಮೂಲಕ ಪುವಾ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮ.2 ಕ್ಕೆ ಬಂದು ತಲುಪುತ್ತದೆ.
ಬೆಂಗಳೂರು ದರ್ಶಿನಿ-2:
ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 8.45ಕ್ಕೆ ಪ್ರಾರಂಭವಾಗಿ ಇಸ್ಕಾನ್ ಪ್ರಸನ್ನ ಆಂಜನೆಯ ದೇವಸ್ಥಾನ, ಜವಹರಲಾಲ್ ನೆಹರು ತಾರಾಲಯ, ಇಂದಿರಾಗಾಂಧಿ ಸಂಗೀತ ಕಾರಂಜಿ, ಕಬ್ಬನ್ ಪಾರ್ಕ್, ವಿಧಾನಸೌಧ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಲಾಲ್‌ಬಾಗ್, ಬನಶಂಕರಿ ದೇವಸ್ಥಾನ, ದೊಡ್ಡಬಸವಣ್ಣ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ, ಟಿಪ್ಪು ಅರಮನೆ ಮೂಲಕ ಮತ್ತೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ 7.50ಕ್ಕೆ ಬಂದು ತಲುಪುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


