ದೇಶ

ಭಾರತರತ್ನ ನೆಲೆವೀಡು ವಾರಣಾಸಿ ದಾಖಲೆ

ಮಾಳವೀಯಗೆ ಭಾರತ ರತ್ನ ಘೋಷಣೆಯಾಗುತ್ತಿದ್ದಂತೆ ವಾರಣಾಸಿ ಹೊಸ ದಾಖಲೆಯೊಂದನ್ನು ಬರೆಯಿತು...

ಭಾರತರತ್ನ ನೆಲೆವೀಡು ವಾರಣಾಸಿ ದಾಖಲೆ
ಐದು ಸಾಧಕರನ್ನು ಹೊಂದಿದ ನಗರ ವಾರಣಾಸಿ
Published On :

ವಾರಣಾಸಿ: ವಾರಣಾಸಿ ದೇಗುಲಗಳ ನಗರವಷ್ಟೇ ಅಲ್ಲ. 'ಭಾರತ ರತ್ನ'ರ ನಗರವೂ ಹೌದು. ಶಿಕ್ಷಣ ತಜ್ಞ ಪಂಡಿತ್ ಮದನ್ ಮೋಹನ್ ಮಾಳವೀಯಗೆ ಭಾರತ ರತ್ನ ಘೋಷಣೆಯಾಗುತ್ತಿದ್ದಂತೆ ದೇಶದ ಅತ್ಯಂತ ಹಳೆದ ನಗರಗಳಲ್ಲೊಂದಾಗದ ವಾರಣಾಸಿ ಹೊಸ ದಾಖಲೆಯೊಂದನ್ನು ಬರೆಯಿತು.

ಈ ರೀತಿ ದೇಶದ ಅತ್ಯುನ್ನತ ಗೌರವ ಪಡೆದ ಐದು ಸಾಧಕರನ್ನು ಹೊಂದಿದ ನಗರ ಎನ್ನುವ ಹೆಗ್ಗಳಿಕೆಗೆ ವಾರಣಾಸಿ ಪಾತ್ರವಾಗಿದೆ.

1955ರಲ್ಲಿ ಶಿಕ್ಷಣತಜ್ಞ, ಕಾಶಿ ವಿದ್ಯಾಪೀಠದ ಸಂಸ್ಥಾಪಕ ಡಾ.ಭಗವಾನ್ ದಾಸ್‌ರಿಗೆ ಭಾರತ ರತ್ನ ಸಿಕ್ಕಿತ್ತು. ದಾಸ್, ಮಾಳವೀಯ ಜತೆ ಸೇರಿ ಬನಾರಸ್ ಹಿಂದೂ ವಿವಿ ಸ್ಥಾಪಿಸುವಲ್ಲೂ ಮಹತ್ವದ ಪಾತ್ರವಹಿಸಿದ್ದರು.

ಆ ಬಳಿಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ(1966), ಪ್ರಸಿದ್ದ ಸಿತಾರ್ ವಾದಕ ಪಂಡಿತ್ ರವಿಶಂಕರ್(1999) ಅವರಿಗೆ ಈ ಗೌರವ ಸಿಕ್ಕಿತ್ತು. ಎರಡು ವರ್ಷಗಳ ಬಳಿಕ 2001ರಲ್ಲಿ ಖ್ಯಾತ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್‌ರನ್ನು ಈ ಗೌರವ ಹುಡುಕಿಕೊಂಡು ಬಂದಿತ್ತು. ಖಾನ್ ಅವರು ಮೂಲತಃ ವಾರಣಾಸಿಯವರಲ್ಲ.

ಹಾಗಿದ್ದರೂ ಅವರು ಇದೇ ನಗರದಲ್ಲಿ ವಾಸಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.