ಮುಜಾಫರ್ ನಗರದಲ್ಲಿ ಮತ್ತೊಂದು ಮರ್ಯಾದ ಹತ್ಯೆ
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

ಅಂತರ್ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ 19 ವರ್ಷದ ಮಗಳನ್ನು ತಂದೆಯೇ ಕೊಂದು, ಅಂತ್ಯಸಂಸ್ಕಾರ ಮಾಡಿದ ಘಟನೆ ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಬೆಳಕಿಗೆ ಬಂದಿದೆ.
ರುಕ್ಸರ್ ಮೃತ ದುರ್ದೈವಿಯಾಗಿದ್ದಾಳೆ. ಹಾಸನ್ ಎಂತಾನೇ ಮಗಳನ್ನು ಕೊಂದುಹಾಕಿದ ಪಾಪಿ ತಂದೆ.
ರುಕ್ಸರ್, ದಲಿತಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಹಾಸನ್ ಇವರ ಪ್ರೀತಿಯನ್ನು ತೀವ್ರವಾಗಿ ಖಂಡಿಸಿದ್ದನು. ತಂದೆಯ ವಿರೋಧದ ನಡುವೆಯು ರುಕ್ಸರ್ ಆತನನ್ನು ಕಾಣಲು ಹೋಗುತ್ತಿದ್ದಳು. ಇದನ್ನು ಕಂಡ ತಂದೆ ಹಾಸನ್ ಕುಪಿತಗೊಂಡು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವಗೊಂಡ ರುಕ್ಸರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ರುಕ್ಸರ್ ತಾಯಿಗೂ ಈ ವಿಷಯ ತಿಳಿಸದೇ, ಆಕೆಯ ಶವವನ್ನು ಸ್ಥಳೀಯ ರುದ್ರಭೂಮಿಯಲ್ಲಿ ಹೂತುಹಾಕಿದ್ದಾನೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನಗೆ ಗೊತ್ತಿಲ್ಲದೆ, ತನ್ನ ಪತಿ ಹಾಗೂ ಆತನ ಸ್ನೇಹಿತರು ನನ್ನ ಮಗಳನ್ನು ಹೆತ್ಯೆ ಮಾಡಿರುವುದಾಗಿ ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಆದರೆ ತಂದೆ ಹಾಸನ್, ನಾನು ಆಕೆಯ ಮಾರಣಾಂತಿಕ ಹಲ್ಲೆ ಮಾಡಿದ್ದೆ, ಆದರೆ ಆಕೆಯ ಸಾವನ್ನಪ್ಪಿರುವ ವಿಚಾರ ತಿಳಿದ ನನ್ನ ಸ್ನೇಹಿತರು ಆಕೆಯನ್ನು ಹೂತುಹಾಕಿದರು ಎಂದು ವಿವರ ನೀಡಿದ್ದಾನೆ. ರುಕ್ಸಾರ್‌ಳ ಪಾರ್ಥೀವ ಶರೀರವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


