ದೇಶ

ಮುಲಾಯಂ ಮೊಮ್ಮಗನ 'ತಿಲಕ' ಸಮಾರಂಭದಲ್ಲಿ ಮೋದಿ ಭಾಗಿ

ಮುಲಾಯಂ ಮೊಮ್ಮಗನ 'ತಿಲಕ' ಸಮಾರಂಭದಲ್ಲಿ ಮೋದಿ ಭಾಗಿ
'ತಿಲಕ' ಸಮಾರಂಭದಲ್ಲಿ ಮೋದಿ
Published On :

ಲಖನೌ/ಸೈಫಾಯ್: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಮೊಮ್ಮಗ, ಹಾಲಿ ಸಂಸದ ತೇಜ್ ಪ್ರತಾಪ್ ಯಾದವ್ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕೊನೆಯ ಪುತ್ರಿ ರಾಜಲಕ್ಷ್ಮೀಯ ವಿವಾಹ ಪ್ರಯುಕ್ತ ಶನಿವಾರ ಉತ್ತರ ಪ್ರದೇಶದ ಸೈಫಾಯ್‌ಯಲ್ಲಿ ನಡೆದ ಮಹಾ ತಿಲಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.

ಇಂದು ಬೆಳಗ್ಗೆ ಸೈಫಾಯ್ ಗ್ರಾಮಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲು ಪ್ರಸಾದ್ ಯಾದವ್ ಅವರು ಸ್ವಾಗತಿಸಿದರು. ಯಾದವ್ ಕುಟುಂಬದೊಂದಿಗೆ ಸುಮಾರು 20 ನಿಮಿಷ ಕಳೆದ ಪ್ರಧಾನಿ, ಬಳಿಕ ದೆಹಲಿಗೆ ತೆರಳಿದರು.

ಮೈನ್‌ಪುರಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜ್ ಪ್ರತಾಪ್ ಯಾದವ್ ಅವರ 'ಮಹಾ ತಿಲಕ'ಕ್ಕೆ ಸೈಫಾಯ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಸಮಾರಂಭಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಸುಮಾರು 1 ಲಕ್ಷ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.