ಉಗ್ರ ನಿಧಿಗೆ ಭಾರತ, ಅಮೆರಿಕ ಬ್ರೇಕ್
ಭಯೋತ್ಪಾದನೆ ನಿಧಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಮಹತ್ವದ ಹೆಜ್ಜೆಯಿಟ್ಟಿದೆ...

ನವದೆಹಲಿ: ಭಯೋತ್ಪಾದನೆ ನಿಧಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಮಹತ್ವದ ಹೆಜ್ಜೆಯಿಟ್ಟಿದೆ. ಪಾಕ್ ಮೂಲದ ಲಷ್ಕರ್, ಜೆಯುಡಿ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ಉಗ್ರ ಚಟುವಟಿಕೆಗೆ ಹಣ ಸಂಗ್ರಹವಾಗುತ್ತಿರುವುದನ್ನು ನಿಲ್ಲಿಸಲು, ಅವರ ಹಣಕಾಸು ಜಾಲದ ಮೇಲೆ ದಾಳಿ ನಡೆಸಲು ಎರಡೂ ರಾಷ್ಟ್ರಗಳು ಕೈಜೋಡಿಸಿವೆ.
ಇವು ಭಯೋತ್ಪಾದನೆ, ಹಣಕಾಸು ಅವ್ಯವಹಾರ ಮತ್ತು ಇತರೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ಒಪ್ಪಂದಕ್ಕೆ ಬಂದಿವೆ. ಅಮೆರಿಕ ಖಜಾನೆ ಕಾರ್ಯದರ್ಶಿ ಜಾಕೋಬ್ ಜೆ.ಲ್ಯೂ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ನಡುವೆ ನಡೆದ ಹಣಕಾಸು ಪಾಲುಗಾರಿಕೆ ಮಾತುಕತೆ ವೇಳೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದೇ ವೇಳೆ, 46ನೇ ರಾಜ್ಯಪಾಲ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನದಲ್ಲಿ ಉಗ್ರರ ಜಾಲ ವಿಸ್ತರಿಸುತ್ತಿರುವುದು ಮತ್ತು ಭಾರತದಲ್ಲಿನ ಉಗ್ರ ಕೃತ್ಯಕ್ಕೆ ಪಾಕ್‌ನ ಪ್ರೇರಣೆ ಭಾರತಕ್ಕೀರುವ ಅತಿದೊಡ್ಡ ಭದ್ರತಾ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


