ವಾರಾಣಸಿಯಲ್ಲಿ ಶುರುವಾಯ್ತು ಬಿಎಸ್ಸೆನ್ನೆಲ್ ವೈ-ಫೈ ಸೇವೆ
ಮೈಸೂರು ಮಾತ್ರವಲ್ಲದೆ ಸದ್ಯದಲ್ಲೇ ಕರ್ನಾಟಕದ ಹಂಪಿ, ಆಗ್ರಾದ ತಾಜ್ ಮಹಲ್, ಮಹಾಬಲಿಪುರಂ...

ವಾರಾಣಸಿ: ಮೈಸೂರು ಮಾತ್ರವಲ್ಲದೆ ಸದ್ಯದಲ್ಲೇ ಕರ್ನಾಟಕದ ಹಂಪಿ, ಆಗ್ರಾದ ತಾಜ್ ಮಹಲ್, ಮಹಾಬಲಿಪುರಂ, ಸಾರಾನಾಥ್ ಸೇರಿದಂತೆ ದೇಶದ ಎಂಟು ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲೂ ಉಚಿತ ವೈಫೈ ಸೇವೆ ಆರಂಭಿಸಲು ಬಿಎಸ್ಎನ್ಎಲ್ ನಿರ್ಧ ರಿಸಿದೆ.
ದೇಶದಲ್ಲಿ ಬಿಎಸ್ಎನ್ ನೆಲ್‍ನ ಮೊದಲ ಉಚಿತ ವೈಫೈ ಸೇವೆಯನ್ನು ವಾರಾಣಸಿಯ ದಶಾಶ್ವಮೇಧ ಘಾಟ್ ಮತ್ತು ಶೀತಲ ಘಾಟ್ ನಲ್ಲಿ ಭಾನುವಾರ ಉದ್ಘಾಟಿಸಿದ ಕೇಂದ್ರ ದೂರ-ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಈ ಮಾಹಿತಿ ನೀಡಿದರು. ಖುಜಾ-ರಹೋ, ತಂಜಾವೂರು, ಬೃಹದೇಶ್ವರ, ಕೋನಾರ್ಕದ ಸೂರ್ಯದೇವಾಲಯ ಉಚಿತ ವೈಫೈ ಸೇವೆಯ ವ್ಯಾಪ್ತಿಗೆ ಒಳಪಡಲಿ ರುವ ಇತರೆ ಪ್ರಮುಖ ಐತಿಹಾಸಿಕ ಪ್ರವಾಸಿ ಕ್ಷೇತ್ರಗಳು.
ಯೋಜನೆಯಡಿ ಪ್ರತಿ ದಿನ ಆರಂಭದಲ್ಲಿ 30 ನಿಮಿಷ ಕಾಲ ಉಚಿತ ವೈಫೈಸೇವೆ ಕಲ್ಪಿಸಲಾಗುತ್ತದೆ. ಆ ಬಳಿಕದ ಪ್ರತಿ 30 ನಿಮಿಷಕ್ಕೆ ರು 20, 60 ನಿಮಿಷಕ್ಕೆ 30, 120 ನಿಮಿಷಕ್ಕೆ ರು 50 ಮತ್ತು ಇಡೀ ದಿನಕ್ಕೆ ರು 70 ಪಾವತಿಸಬೇಕಾಗುತ್ತದೆ.
ಮಂಡ್ಯದಲ್ಲೂ ಬ್ರಾಡ್‍ಬ್ಯಾಂಡ್
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಕರ್ನಾಟಕದ ಮಂಡ್ಯ ಜಿಲ್ಲೆಯ ಪ್ರತಿ ಜಿಲ್ಲೆಯ ಗ್ರಾ.ಪಂ.ಗಳಿಗೂ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಲಭ್ಯವಾಗಲಿದೆ. ಈ ಮೂಲಕ ಇಂಥ ಸಾಧನೆ ಮಾಡಿದ ಕರ್ನಾಟಕದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದಿದ್ದಾರೆ ಜಿಪಂ ಸಿಇಒ ರೋಹಿಣಿ ಸಿಂಧೂರಿ. ಯೋಜನೆಗಾಗಿ ರು 12.70 ಕೋಟಿ ಖರ್ಚಾಗಲಿದೆ. ಅದರಲ್ಲಿ ಕೇಬಲ್ ಅಳವಡಿಕೆಗೆ ರು 9.30 ಕೋಟಿ, ಬ್ರಾಡ್‍ಬ್ಯಾಂಡ್ ಉಪಕರಣಗಳಿಗೆ ರು 3.40 ಕೋಟಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


