ದೇಶ

ಹೆಚ್ಚಿನ ಭದ್ರತಾ ಸಿಬ್ಬಂದಿ ತೆಗೆದು ಹಾಕಿದ ಹರ್ಯಾಣ ಮುಖ್ಯಮಂತ್ರಿ

ಬೆದರಿಕೆ ಇಲ್ಲದಿದ್ದರೂ ತಮಗೂ ವಿವಿಐಪಿ ಭದ್ರತೆಯೇ ಬೇಕು ಎನ್ನುವ ನಾಯಕರೇ ಹೆಚ್ಚು. ಆದರೆ ಅವರೆಲ್ಲರಿಗೂ...

ಹೆಚ್ಚಿನ ಭದ್ರತಾ ಸಿಬ್ಬಂದಿ ತೆಗೆದು ಹಾಕಿದ ಹರ್ಯಾಣ ಮುಖ್ಯಮಂತ್ರಿ
ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
Published On :

ಚಂಡೀಗಢ: ಬೆದರಿಕೆ ಇಲ್ಲದಿದ್ದರೂ ತಮಗೂ ವಿವಿಐಪಿ ಭದ್ರತೆಯೇ ಬೇಕು ಎನ್ನುವ ನಾಯಕರೇ ಹೆಚ್ಚು. ಆದರೆ ಅವರೆಲ್ಲರಿಗೂ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾದರಿಯಾಗಿದ್ದಾರೆ.

ತಮ್ಮ ಭದ್ರತೆಗಾಗಿ ನಿಯೋಜಿತರಾಗಿದ್ದ 130 ಸಿಬ್ಬಂದಿಯನ್ನು ತೆಗೆದು ಹಾಕಿದ್ದಾರೆ. ಸದ್ಯ ಅವರು ಜೆಡ್ ವರ್ಗದ ಭದ್ರತೆ ಹೊಂದಿದ್ದಾರೆ. ಸಿಬ್ಬಂದಿ ಪ್ರಮಾಣ ತಗ್ಗಿಸುವ ಮೂಲಕ ಸರಳ ಜೀವನ ನಡೆಸಲು ಮುಂದಾಗಿದ್ದಾರೆ. ಜತೆಗೆ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಉಂಟಾಗುವ ಹೊರೆ ತಗ್ಗಿಸುವ ಪ್ರಯತ್ನ ಮಾಡಿದ್ದಾರೆ.

ಒಟ್ಟಾರೆಯಾಗಿ ಭದ್ರತಾ ಕೆಲಸಕ್ಕಾಗಿ ನಿಯೋಜಿತರಾಗಿದ್ದ 730 ಮಂದಿ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಲಾಗಿದೆ. ಅದೇ ಮಾದರಿಯನ್ನು ಖಟ್ಟರ್ ಸಂಪುಟದ ಸದಸ್ಯರೂ ಅನುಸರಿಸುತ್ತಿದ್ದಾರೆ.

ಇದರ ಜತೆಗೆ ಹಲವು ಪ್ರಥಮಗಳ ಸರದಾರರಾಗಿರುವ ಖಟ್ಟರ್ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕುಟುಂಬ ರಹಿತರಾಗಿ ವಾಸಿಸುತ್ತಿದ್ದಾರೆ.

ವಿಮಾನ ಖರೀದಿಗೆ ನಕಾರ: ಭೂಪೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿಯ ಪ್ರಯಾಣಕ್ಕಾಗಿ ವಿಮಾನ ಖರೀದಿಗೆ ಮುಂದಾಗಿತ್ತು. ಆ ಪ್ರಸ್ತಾಪವನ್ನೂ ಒಪ್ಪಿಕೊಳ್ಳಲು ಅವರು ನಿರಾಕರಿಸಿದ್ದಾರೆ. ವಿಮಾನ ಖರೀದಿಗಾಗಿ ಬೊಕ್ಕಸದಿಂದ ರು.45 ಕೋಟಿ ವೆಚ್ಚ ಮಾಡಬೇಕಾಗುತ್ತದೆ.

ಸದ್ಯ ರಾಜ್ಯ ಸರ್ಕಾರದ ಉಪಯೋಗಕ್ಕಾಗಿ ಕಿಂಗಏರ್‌ಬಿ-200 ವಿಮಾನ ಮತ್ತು ಹೆಲಿಕಾಫ್ಟರ್ ಇದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದಾದ ಬಳಿಕ ಅದು ದುರಸ್ತಿಗಾಗಿ ಕಾಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.