ದೇಶ

ಪ್ರಾಣವನ್ನೇ ಒತ್ತೆ ಇಟ್ಟು ವಿಮಾನವನ್ನು ನದಿಗಿಳಿಸಿದ

ತೈವಾನ್ ರಾಜಧಾನಿ ತೈಪೆಯಲ್ಲಿ ನಡೆದ ವಿಮಾನ ಅಪಘಾತ ಪ್ರಕರಣದಲ್ಲಿ ಟ್ರಾನ್ಸ್ ಏಷ್ಯಾ ವಿಮಾನದ ಪೈಲಟ್ ತನ್ನ ಸಮಯೋಚಿತ ನಿರ್ಧಾರದಿಂದಾಗಿ...

ಪ್ರಾಣವನ್ನೇ ಒತ್ತೆ ಇಟ್ಟು ವಿಮಾನವನ್ನು ನದಿಗಿಳಿಸಿದ
ದುರಂತಕ್ಕೂ ಮುನ್ನ ಮೇಲ್ಸೇತುವೆಗೆ ಗುದ್ದಿದ ವಿಮಾನ (ಸಂಗ್ರಹ ಚಿತ್ರ)
Published On :

ತೈಪೆ: ತೈವಾನ್ ರಾಜಧಾನಿ ತೈಪೆಯಲ್ಲಿ ನಡೆದ ವಿಮಾನ ಅಪಘಾತ ಪ್ರಕರಣದಲ್ಲಿ ಟ್ರಾನ್ಸ್ ಏಷ್ಯಾ ವಿಮಾನದ ಪೈಲಟ್ ತನ್ನ ಸಮಯೋಚಿತ ನಿರ್ಧಾರದಿಂದಾಗಿ ಉಂಟಾಗಬಹುದಾಗಿದ್ದ ಭಾರಿ ದುರಂತವನ್ನು ತಪ್ಪಿಸಿದ್ದಾನೆ.

ತೈಪೆ ವಿಮಾನ ದುರಂತದ ಬಳಿಕ ನಡೆದ ತಜ್ಞರ ತನಿಖೆ ವೇಳೆ ಇಂತಹುದೊಂದು ಅಭಿಪ್ರಾಯ ಮೂಡಿಬಂದಿದ್ದು, ವಿಮಾನ ನದಿಗೆ ಅಪ್ಪಳಿಸುವ ಮುನ್ನ 2 ಬೃಹತ್ ಗಗನ ಚುಂಬಿ ಕಟ್ಟಡಗಳನ್ನು ದಾಟಿ ನಂತರ ಮೇಲ್ಸುತೆವೆಗೆ ತಾಗಿ ಆ ಬಳಿಕ ನದಿಗೆ ಉರುಳಿತ್ತು. ಒಂದು ವೇಳೆ ವಿಮಾನವು ಆ ಕಟ್ಟಡಗಳ ಪೈಕಿ ಒಂದಕ್ಕೆ ಡಿಕ್ಕಿ ಹೊಡೆದಿದ್ದರೂ ಭಾರಿ ದುರಂತವೇ ನಡೆದು ಹೋಗುತ್ತಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಕಟ್ಟಡದಲ್ಲಿದ್ದ ನಿವಾಸಿಗಳು ಎಲ್ಲರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಪೈಲಟ್ ಸಮಯೋಚಿತವಾಗಿ ನಿರ್ಧರಿಸಿ ವಿಮಾನವನ್ನು ನದಿಗೆ ಇಳಿಸಿದ್ದಾನೆ. ಇದರಿಂದ ಭಾರಿ ಪ್ರಮಾಣದ ದುರಂತವಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ ಎಂದು ಹೇಳಲಾಗುತ್ತಿದೆ. ಪೈಲಟ್‌ನ ಈ ದಿಟ್ಟ ನಿರ್ಧಾರಕ್ಕೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗುತ್ತಿದ್ದು, ತೈಪೆ ನಗರದಲ್ಲಿ ಪೈಲಟ್ ಇದೀಗ ಹೀರೋ ಆಗಿದ್ದಾನೆ.

ಟ್ರಾನ್ಸ್ ಏಷ್ಯಾ ವಿಮಾನದ ದುರಂತದಲ್ಲಿ ಈವರೆಗೂ 31 ಮಂದಿ ಮೃತಪಟ್ಟಿದ್ದು, ಇನ್ನೂ 12 ಮಂದಿ ನಾಪತ್ತೆಯಾಗಿದ್ದಾರೆ. ವಿಪರ್ಯಾಸವೆಂದರೆ ಈ 12 ಮಂದಿಯಲ್ಲಿ ಪೈಲಟ್ ಮತ್ತು ಸಹ ಪೈಲಟ್‌ಗಳು ಕೂಡ ಇದ್ದಾರೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ನಾಪತ್ತೆಯಾಗಿರುವವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಬೆಂಕಿ ಬರುತ್ತಿದೆ: ಪೈಲಟ್ ಕೊನೆ ಮಾತು
ಇನ್ನು ಟ್ರಾನ್ಸ್ ಏಷ್ಯಾ ವಿಮಾನ ದುರಂತಕ್ಕೀಡಾಗುವ ಮುನ್ನ ಪೈಲಟ್ ವಾಯುಗೋಪುರಕ್ಕೆ ಕೊನೆಯ ಸಂದೇಶ ರವಾನಿಸಿದ್ದ. ಈ ಸಂದೇಶದಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿದೆ. ವಿಮಾನದ ಎಂಜಿನ್‌ನಲ್ಲಿ ಬೆಂಕಿ ಬರುತ್ತಿದೆ ಎಂದು ಕೂಗಿಕೊಂಡಿದ್ದ ಎಂದು ತೈಪೆ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋ ನೋಡಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.