ದೇಶ

14ರಂದು ಪ್ರೇಮ ವಿವಾಹ ದಿನ

ಫೆ . 14 ಅಂದ್ರೆ ಎಲ್ಲರಿಗೂ ನೆನಪಾಗೋದು ಪ್ರೇಮಿಗಳ ದಿನ ಎಂದು. ಆದರೆ, ಹಿಂದೂ ಮಹಾಸಭಾದವರು ಅಂದು `ಪ್ರೇಮ ವಿವಾಹ ದಿನ...

14ರಂದು ಪ್ರೇಮ ವಿವಾಹ ದಿನ
ಫೆ. 14 ಕ್ಯಾಲೆಂಡರ್
Published On :

ನವದೆಹಲಿ: ಫೆ . 14 ಅಂದ್ರೆ ಎಲ್ಲರಿಗೂ ನೆನಪಾಗೋದು ಪ್ರೇಮಿಗಳ ದಿನ ಎಂದು. ಆದರೆ, ಹಿಂದೂ ಮಹಾಸಭಾದವರು ಅಂದು `ಪ್ರೇಮ ವಿವಾಹ ದಿನ' ಎಂದು ಆಚರಿಸಲು ನಿರ್ಧರಿಸಿದ್ದಾರೆ. ಘರ್ ವಾಪಸಿಯ (ಮರು ಮತಾಂತರ) ಒಂದು ಭಾಗವಾಗಿ ಈ ಆಚರಣೆ ಮಾಡಲಾಗುತ್ತಿದೆ ಎಂದು ಸಂಘಟನೆ ಹೇಳಿಕೊಂಡಿದೆ. ಅಂದು ಅಂತರ್‍ಧರ್ಮೀಯ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೇರೆ ಧರ್ಮದ ಯುವತಿಯರನ್ನು ಪ್ರೀತಿಸಿದ ಹಿಂದೂ ಯುವಕರು ವಿವಾಹವಾಗಲು ಇಚ್ಛಿಸಿದರೆ ಅಂಥವರಿಗೆ ಕಂಕಣ ಭಾಗ್ಯ ದೊರಕಿಸುವುದಾಗಿ ಸಭಾ ಹೇಳಿಕೊಂಡಿದೆ. ಆದರೆ, ಇದಕ್ಕೊಂದು ಷರತ್ತು ಇಟ್ಟಿರುವ ಮಹಾಸಭಾ, ಬೇರೆ ಧರ್ಮದಯುವತಿಯರು ವಿವಾಹಕ್ಕೆ ಮುಂಚೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಬೇಕು. ಈ ಷರತ್ತಿಗೆ ಒಪ್ಪಿದರೆ ಅಂದು ಸಂಘಟನೆಯ ಕಚೇರಿಯಲ್ಲೇ ವಿವಾಹವನ್ನು ನೆರವೇರಿಸಲಾಗುತ್ತದೆ. ಒಂದು ದಿನ ಮುಂಚೆ ಸಂಘಟನೆಗೆ ತಿಳಿಸಿದರೆ, ವಿವಾಹ ಮಾಡುವ ಒಂದು ಗಂಟೆ ಮೊದಲು ಮತಾಂತರಗೊಳಿಸುವ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ  ಚಂದ್ರ ಪ್ರಕಾಶ್ ಕೌಶಿಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.