ದೇಶ

ಡಿಮ್ಯಾಟ್ ಖಾತೆ ತೆರೆಯುವುದು ಇನ್ನು ಸುಲಭ?

ಇನ್ನು ಮುಂದೆ ಡಿಮ್ಯಾಟ್ ಖಾತೆ ತೆರೆಯಲು 3-5 ದಿನಗಳು ಕಾಯಬೇಕಾಗಿಲ್ಲ. ಆದಷ್ಟು ಬೇಗನೆ ನಿಮ್ಮ ...

ಡಿಮ್ಯಾಟ್ ಖಾತೆ ತೆರೆಯುವುದು ಇನ್ನು ಸುಲಭ?
Published On :

ನವದೆಹಲಿ: ಇನ್ನು ಮುಂದೆ ಡಿಮ್ಯಾಟ್ ಖಾತೆ ತೆರೆಯಲು 3-5 ದಿನಗಳು ಕಾಯಬೇಕಾಗಿಲ್ಲ. ಆದಷ್ಟು ಬೇಗನೆ ನಿಮ್ಮ ಖಾತೆ ತೆರೆಯುವ ಕಾರ್ಯ ಪೂರ್ಣಗೊಳ್ಳಲಿದೆ.

ಖಾತೆ ತೆರೆಯುವ ಅವ್ಯಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವು ಸೆಬಿಗೆ ಕೋರಿಕೆ ಸಲ್ಲಿಸಿದೆ. ಇದಕ್ಕೆ ಸೆಬಿ ಒಪ್ಪಿದರೆ ಜನ ಸಾಮಾನ್ಯರು ಡಿಮ್ಯಾಟ್ ಖಾತೆ ತೆರೆಯಲು ಪರದಾಡಬೇಕಾದ ಪರಿಸ್ಥಿತಿ ಇರುವುದಿಲ್ಲ.ಸಾರ್ವಜನಿಕ ವಲಯದ ಸಂಸ್ಥೆಗಳ ಷೇರು ಮಾರಾಟದಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕಾರ್ಯತಂತ್ರವೊಂದನ್ನು ಸಿದ್ಧಪಡಿಸಿದೆ.

ಅದೇನೆಂದರೆ, ಹೆಚ್ಚಿನ ಜನರನ್ನು ಡಿಮ್ಯಾಟ್ ಖಾತೆ ತೆರೆಯುವಂತೆ ಪ್ರೇರೇಪಿಸುವುದು. ಪಿಎಸ್‍ಯು ಷೇರುಗಳ ಖರೀದಿಯತ್ತ ಜನಸಾಮಾನ್ಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಇಂತಹ ಹೂಡಿಕೆದಾರರ ಕೋಟಾವನ್ನು ದುಪ್ಪಟ್ಟು(ಶೇ.20) ಮಾಡಲಾಗಿದೆ ಎಂದು ಹೂಡಿಕೆ ಹಿಂತೆಗೆತ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.