ಕಾಶ್ಮೀರ ಬಾವುಟಕ್ಕೆ ರಾಷ್ಟ್ರಧ್ವಜದ ಸಮಾನ ಸ್ಥಾನ ಆದೇಶಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ತಡೆಯಾಜ್ಞೆ
ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ವಾಹನ ಹಾಗೂ ಸರ್ಕಾರದ ಕಟ್ಟಡಗಳಲ್ಲಿ ಬಳಕೆ ಮಾಡುವ ಧ್ವಜದ ಬಗ್ಗೆ ಹೊಸ ಗೊಂದಲವೊಂದು ಉಂಟಾಗಿದೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ವಾಹನ ಹಾಗೂ ಸರ್ಕಾರದ ಕಟ್ಟಡಗಳಲ್ಲಿ ಬಳಕೆ ಮಾಡುವ ಧ್ವಜದ ಬಗ್ಗೆ ಹೊಸ ಗೊಂದಲವೊಂದು ಉಂಟಾಗಿದೆ.
ಸರ್ಕಾರಿ ಕಟ್ಟಡ, ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಗೂ ರಾಜ್ಯದ ಧ್ವಜವನ್ನು ಹಾಕಬೇಕು ಎಂದು ಡಿ.27 ರಂದು ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಇದೇ ಆದೇಶಕ್ಕೆ ಈಗ ತಡೆ ನೀಡಲಾಗಿದೆ.
ರಾಷ್ಟ್ರಧ್ವಜದ ಜತೆಗೆ ರಾಜ್ಯ ಧ್ವಜವನ್ನು ಸಾಂವಿಧಾನಿಕ ಸಂಸ್ಥೆಗಳ ಅಧಿಕೃತ ಕಚೇರಿಗಳು ಹಾಗೂ ವಾಹನಗಳ ಮೇಲೆ ಆರೋಹಿಸುವಂತೆ ನೀಡಿದ್ದ ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶವನ್ನು ಬಿಜೆಪಿ ಪ್ರಶ್ನಿಸಿತ್ತು.
ಸಂವಿಧಾನದ 370 ನೇ ವಿಧಿ ಪ್ರಕಾರ ರಾಷ್ಟ್ರಧ್ವಜದೊಂದಿಗೆ ರಾಜ್ಯಧ್ವಜವನ್ನೂ ಆರೋಹಿಸುವ ಅಧಿಕಾರ ಭಾರತದಲ್ಲಿ ಜಮ್ಮು-ಕಾಶ್ಮೀರಕ್ಕೆ ಮಾತ್ರ ನೀಡಲಾಗಿತ್ತು. ಆದರೆ ಈಗ ಹೈಕೋರ್ಟ್ ತನ್ನ ಆದೇಶಕ್ಕೆ ತಡೆ ನೀಡಿದೆ. ಸಾಂವಿಧಾನಿಕ ಸಂಸ್ಥೆಗಳ ಕಚೇರಿ ಹಾಗೂ ವಾಹನಗಳ ಮೇಲೆ ರಾಷ್ಟ್ರಧ್ವಜದ ಜತೆಗೆ ರಾಜ್ಯ ಧ್ವಜವನ್ನೂ ಹಾರಾಟ ಮಾಡಬೇಕು ಎಂದು ಜಮ್ಮು-ಕಾಶ್ಮೀರದ ಪಿಡಿಪಿ- ಬಿಜೆಪಿ ಸಮ್ಮಿಶ್ರ ಸರ್ಕಾರ ಮಾ.12 ರಂದು ಸುತ್ತೋಲೆ ಹೊರಡಿಸಿತ್ತು.
ಆದರೆ ಒಂದೇ ದೇಶದಲ್ಲಿ 2 ಧ್ವಜ ಬೇಡ ಎಂದು ಬಿಜೆಪಿ ನಿಲುವು ತಳೆದಿತ್ತು. ಹೀಗಾಗಿ ಸರ್ಕಾರ ಮಾ.12ರ ಸುತ್ತೋಲೆಯನ್ನು ಮರುದಿನವೇ ಹಿಂಪಡೆದಿತ್ತು. ಇದರ ವಿರುದ್ಧ ಅಬ್ದುಲ್ ಖಯೂಂ ಖಾನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


