ಸೋನಿಯಾ ಗಾಂಧಿ ಮನೆ ಪ್ರಧಾನಿ ಮನೆಗಿಂತ ದೊಡ್ಡದು!
ನಂಬಲು ಕಷ್ಟವಾದರೂ ಇದು ಸತ್ಯ. ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕಿಂತ...

ನವದೆಹಲಿ: ನಂಬಲು ಕಷ್ಟವಾದರೂ ಇದು ಸತ್ಯ. ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕಿಂತ ಜನಪಥ ರಸ್ತೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ ದೊಡ್ಡದಾಗಿದೆ.
ದೇವ್ ಅಶೀಶ್ ಭಟ್ಟಾಚಾರ್ಯ, ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ಸಿಕ್ಕಿದ ಮಾಹಿತಿ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷೆಯವರ ನಿವಾಸದ ವಿಸ್ತೀರ್ಣ 15 ಸಾವಿರದ 181 ಚದರಡಿ ಇದ್ದರೆ ಪ್ರಧಾನಿಯವರದ್ದು, 14 ಸಾವಿರದ 101 ಚದರಡಿ. ಇನ್ನು ಸೋನಿಯಾ ಗಾಂಧಿಯವರ ಪುತ್ರ ರಾಹುಲ್ ಗಾಂಧಿಯವರಿಗೆ ಸರ್ಕಾರದಿಂದ ದೆಹಲಿಯ ತುಘಲಕ್ ರಸ್ತೆಯಲ್ಲಿ 5 ಸಾವಿರದ 22.58 ಚದರಡಿ ವಿಸ್ತೀರ್ಣದ ಬಂಗಲೆಯನ್ನು ನೀಡಲಾಗಿದೆ. ಇನ್ನು ಪ್ರಿಯಾಂಕ ಗಾಂಧಿ ಸಂಸದೆ ಅಲ್ಲದಿದ್ದರೂ ಅವರಿಗೆ ಲೋಧಿ ಎಸ್ಟೇಟ್ ನಲ್ಲಿ 2 ಸಾವಿರದ 765 ಚದರಡಿ ವಿಸ್ತೀರ್ಣದ ಮನೆಯನ್ನು ನೀಡಲಾಗಿದೆ.
ನಮ್ಮ ದೇಶದಲ್ಲಿ ಸರ್ಕಾರದಿಂದ ಇಬ್ಬರಿಗೆ ಮಾತ್ರ ಅತಿ ದೊಡ್ಡ ಮನೆ ನೀಡಲಾಗಿದೆ. ಅವರೆಂದರೆ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ. ರಾಷ್ಟ್ರಪತಿ ಭವನದ ವಿಸ್ತೀರ್ಣ 320 ಎಕರೆ ಇದ್ದು, ಅದು ಎಲ್ಲದಕ್ಕಿಂತ ಅತಿ ಹೆಚ್ಚಾಗಿದೆ.
ಆದರೆ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆಯಡಿ ಭದ್ರತೆಯ ಕಾರಣದಿಂದ ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರಿಗೆ ಸೇರಿರುವ ಆಸ್ತಿ ವಿವರವನ್ನು ಬಹಿರಂಗಪಡಿಸಲು ಅಲ್ಲಿನ ಸರ್ಕಾರ ಒಪ್ಪಿಕೊಂಡಿಲ್ಲ ಎಂದು ದೇವ್ ಆಶೀಶ್ ಭಟ್ಟಾಚಾರ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


