ಕೇಜ್ರಿವಾಲ್ ಸಮ-ಬೆಸ ನಿಯಮದಿಂದ ವಿವಿಐಪಿಗಳಿಗೆ ವಿನಾಯ್ತಿ, ಬರೀ 'ಬೂಟಾಟಿಕೆ': ವಾದ್ರಾ
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಜನವರಿ 1ರಿಂದ ಜಾರಿಗೆ ತರಲು ಮುಂದಾಗಿರುವ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ...

Published On :
ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಜನವರಿ 1ರಿಂದ ಜಾರಿಗೆ ತರಲು ಮುಂದಾಗಿರುವ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮದಲ್ಲಿ ವಿವಿಐಪಿಗಳಿಗೆ ವಿನಾಯ್ತಿ ನೀಡಿರುವುದನ್ನು ತೀವ್ರವಾಗಿ ಟೀಕಿಸಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರು, ಇದೊಂದು ದೊಡ್ಡ 'ಬೂಟಾಟಿಕೆ' ಎಂದಿದ್ದಾರೆ.
ಕೇಜ್ರಿವಾಲ್ ಸರ್ಕಾರದ ಸಮ-ಬೆಸ ಸಂಖ್ಯೆ ನಿಯಮದ ಬಗ್ಗೆ ತಮ್ಮ ಫೇಸ್‌ಬುಕ್ ನಲ್ಲಿ ಬರೆದುಕೊಂಡಿರುವ ವಾದ್ರಾ, ಸಮ ಬೆಸ ಮಾರ್ಗ! ಸಮಾನಾಂತರ ರಿಯಾಯಿತಿ ಪಟ್ಟಿ ಸಂಪೂರ್ಣ ಬೂಟಾಟಿಕೆ. ಕಾನೂನನ್ನು ಜನರ ಹಿತಾಸಕ್ತಿಯಲ್ಲಿ ಅನುಷ್ಠಾನಿಸಬೇಕು; ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕೇ ಹೊರತು ವಿಐಪಿಗಳಾಗುವುದಲ್ಲ ಎಂದು ಟೀಕಿಸಿದ್ದಾರೆ.
15 ದಿನಗಳ ಪ್ರಾಯೋಗಿಕ ಅವಧಿಗೆಂದು ಜನವರಿ 1ರಿಂದ ಜಾರಿಗೆ ಬರುತ್ತಿರುವ ಸಮ ಬೆಸ ಸಂಖ್ಯೆ ವಾಹನ ನಿಯಮದಡಿ ದೆಹಲಿ ಸರ್ಕಾರ ವಿನಾಯಿತಿ ಪಟ್ಟಿಯನ್ನು ಸಿದ್ಧಪಡಿಸಿದ್ದು, ಆ ಪ್ರಕಾರ ಪ್ರಧಾನಿ, ಮುಖ್ಯಮಂತ್ರಿಗಳು, ರಾಷ್ಟ್ರಪತಿ, ವರಿಷ್ಠ ನ್ಯಾಯಮೂರ್ತಿಗಳು ಮುಂತಾದ ಗಣ್ಯಾತಿಗಣ್ಯರಿಗೆ ಈ ಸಾರಿಗೆ ನಿಯಮದಿಂದ ವಿನಾಯ್ತಿ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


