ಮನಮೋಹನ್ ಸಿಂಗ್ ಕನಸು ನನಸು ಮಾಡಿದ ಪ್ರಧಾನಿ ಮೋದಿ
ನನಗೆ ದೆಹಲಿಯಲ್ಲಿ ಬೆಳಗ್ಗಿನ ಉಪಾಹಾರ, ಪಾಕಿಸ್ತಾನದಲ್ಲಿ ಮಧ್ಯಾಹ್ನದ ಭೋಜನ ಮತ್ತು ಅಫ್ಘಾನಿಸ್ತಾನದಲ್ಲಿ ರಾತ್ರಿಯ ಊಟ ಮಾಡಬೇಕೆಂಬ ಆಸೆಯಿದೆ ಎಂದು...

Published On :
ನವದೆಹಲಿ: ನನಗೆ ದೆಹಲಿಯಲ್ಲಿ ಬೆಳಗ್ಗಿನ ಉಪಾಹಾರ, ಪಾಕಿಸ್ತಾನದಲ್ಲಿ ಮಧ್ಯಾಹ್ನದ ಭೋಜನ ಮತ್ತು ಅಫ್ಘಾನಿಸ್ತಾನದಲ್ಲಿ ರಾತ್ರಿಯ ಊಟ ಮಾಡಬೇಕೆಂಬ ಆಸೆಯಿದೆ ಎಂದು ಎಂಟು ವರ್ಷಗಳ ಹಿಂದೆ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹೇಳಿದ್ದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಮನಮೋಹನ್ ಸಿಂಗ್ ಅವರ ಕನಸನ್ನು ನನಸು ಮಾಡಿದ್ದಾರೆ. ಮನಮೋಹನ್ ಸಿಂಗ್ ಹೇಳಿದ ಅದೇ ಕ್ರಮದಲ್ಲಿ ಅಲ್ಲ, ಅದರ ನೇರ ವಿರುದ್ಧ ಕ್ರಮದಲ್ಲಿ ಮೋದಿ, ಸಿಂಗ್ ಆಸೆಯನ್ನು ಪೂರೈಸಿದ್ದಾರೆ.
2007, ಜನವರಿ 8 ರಂದು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮನಮೋಹನ್ ಸಿಂಗ್ ತಮ್ಮ ಈ ಆಸೆಯನ್ನು ವ್ಯಕ್ತ ಪಡಿಸಿದ್ದರು.
ಅಮೃತಸರದಲ್ಲಿ ಬೆಳಗ್ಗಿನ ಉಪಾಹಾರ, ಲಾಹೋರ್‌ನಲ್ಲಿ ಮಧ್ಯಾಹ್ನದೂಟ ಮತ್ತು ಕಾಬೂಲ್‌ನಲ್ಲಿ ರಾತ್ರಿಯ ಊಟ ಮಾಡಬೇಕೆಂಬುದು ನನ್ನ ಆಸೆ. ನನ್ನ ಹಿರೀಕರು ಈ ರೀತಿ ಬೆಳೆದಿದ್ದರು. ನಮ್ಮ ಮೊಮ್ಮಕ್ಕಳು ಕೂಡಾ ಇದೇ ರೀತಿ ಬದುಕಬೇಕೆಂದು ನಾನು ಬಯಸುತ್ತೇನೆ ಎಂದು ಸಿಂಗ್ ಹೇಳಿದ್ದರು. ಇದೀಗ ಪಾಕಿಸ್ತಾನದ ಭಾಗವಾಗಿರುವ ಗಾಹ್‌ನಲ್ಲಿ ಮನಮೋಹನ್ ಸಿಂಗ್ ಜನಿಸಿದ್ದರು.
ದಕ್ಷಿಣ ಏಷ್ಯಾದ ಜನರೊಂದಿಗೆ ಸ್ನೇಹ ಹಸ್ತ ಚಾಚಿದ್ದ ಸಿಂಗ್, ರಾಜಕೀಯ ಗಡಿರೇಖೆಗಳು ಸಾಮಾಜಿಕ ಮತ್ತು ಆರ್ಥಿಕ ಗಡಿರೇಖೆಗಳಾಗಬಾರದು ಎಂದು ತಾನು ಬಯಸುತ್ತಿರುವುದಾಗಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


