ಮೋದಿ 24x 7 ಕೆಲಸ ಮಾಡ್ತಾರೆ, ಅಧಿಕಾರಕ್ಕೇರಿದ ನಂತರ ರಜಾ ತೆಗೆದುಕೊಂಡೇ ಇಲ್ಲ
ಮೋದಿಯವರು ಮೇ 26, 2014ರಂದು ಅಧಿಕಾರಕ್ಕೇರಿದ ನಂತರ ಇಲ್ಲಿಯವರೆಗೆ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲವಂತೆ....

Published On :
ನವದೆಹಲಿ: 2014ರಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ನಾನು ಅಧಿಕಾರಕ್ಕೇರಿದರೆ ವಿಶ್ರಾಂತಿ ತೆಗೆದುಕೊಳ್ಳದೆ ದೇಶಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದರು. ಅಧಿಕಾರಕ್ಕೇರಿದ ನಂತರ ಮೋದಿ ಈ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ.
ಮಾಧ್ಯಮವೊಂದರ ವರದಿ ಪ್ರಕಾರ ಮೋದಿಯವರು ಮೇ 26, 2014ರಂದು ಅಧಿಕಾರಕ್ಕೇರಿದ ನಂತರ ಇಲ್ಲಿಯವರೆಗೆ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲವಂತೆ.
ಮೋದಿ ಬಗ್ಗೆ ಆರ್‌ಟಿಐ ಮೂಲಕ ಪ್ರಶ್ನೆ ಕೇಳಲಾಗಿದ್ದು, ಈ ಪ್ರಶ್ನೆಗೆ ಪ್ರಧಾನಿಮಂತ್ರಿಯವರ ಕಾರ್ಯಾಲಯ ಉತ್ತರ ನೀಡಿದೆ.
ಅಷ್ಟೇ ಅಲ್ಲ ಮೋದಿ ಪ್ರತೀ ದಿನ ಕಾರ್ಯ ನಿರತರಾಗಿರುತ್ತಾರೆ ಎಂದು ಹೇಳಿರುವ ಕಾರ್ಯಾಲಯ ಮೋದಿಯವರ ಕಚೇರಿ ಸಮಯವನ್ನೂ ಬಹಿರಂಗ ಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


