ದೇಶ

ಡಿ. 26 ರಂದು ದಾವೂದ್ ಇಬ್ರಾಹಿಂ ಹುಟ್ಟುಹಬ್ಬ: ಉತ್ತರಾಧಿಕಾರಿ ಘೋಷಣೆ ಸಾಧ್ಯತೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಡಿಸೆಂಬರ್ 26ರಂದು 60ನೇ ವರ್ಷಕ್ಕೆ ಕಾಲಿಡುತ್ತಿದ್ದು ಪಾಕಿಸ್ತಾನದಲ್ಲಿ ತನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾನೆ.

ಡಿ. 26 ರಂದು ದಾವೂದ್ ಇಬ್ರಾಹಿಂ ಹುಟ್ಟುಹಬ್ಬ: ಉತ್ತರಾಧಿಕಾರಿ ಘೋಷಣೆ ಸಾಧ್ಯತೆ
ದಾವೂದ್ ಇಬ್ರಾಹಿಂ
Published On :

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಡಿಸೆಂಬರ್ 26ರಂದು 60ನೇ ವರ್ಷಕ್ಕೆ ಕಾಲಿಡುತ್ತಿದ್ದು ಪಾಕಿಸ್ತಾನದಲ್ಲಿ ತನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾನೆ. ಈ ಕಾರ್ಯಕ್ರಮಕ್ಕೆ ತನ್ನ ಆಪ್ತರನ್ನು ಆಹ್ವಾನಿಸಿದ್ದಾನೆ.

ಕರಾಚಿಯ ಮ್ಯಾರಿಯಟ್ ಅಥವಾ ರಮ್ದಾನ್ ಪ್ಲಾಜಾ ಹೋಟೆಲ್‌ನಲ್ಲಿ ಈ ಕಾರ‌್ಯಕ್ರಮ ನಡೆಯುವ ಸಾಧ್ಯತೆಯಿದೆ. ಸಮಾರಂಭ ಎಲ್ಲಿ ನಡೆಯಬೇಕೆಂಬ ಅಂತಿಮ ನಿರ್ಧಾರವನ್ನು ದಾವೂದ್ ಬಲಗೈ ಬಂಟ ಛೋಟಾ ಶಕೀಲ್ ನಿರ್ಧರಿಸಲಿದ್ದಾನೆ.

ಲಂಡನ್, ದುಬೈ, ಮುಂಬಯಿ ಸೇರಿದಂದೆ ಡಿ ಕಂಪನಿ ಜತೆ ನಂಟು ಹೊಂದಿರುವ ವಿಶ್ವದ ನಾನಾ ಭಾಗದಲ್ಲಿರುವ ಆಪ್ತರಿಗೆ ಹುಟ್ಟುಹಬ್ಬದ ಆಹ್ವಾನ ಕಳುಹಿಸಿರುವ ದಾವೂದ್, ಆ ದಿನ ತನ್ನ ಬದುಕಿನ ಮಹತ್ವದ ಗುರುತಾಗಲಿದ್ದು ಎಲ್ಲರೂ ತಪ್ಪದೇ ಹಾಜರಾಗಬೇಕೆಂದು ಆಹ್ವಾನ ಪತ್ರಿಕೆಯಲ್ಲಿ ಹೇಳಿದ್ದಾನೆ. ಈ ವೇಳೆ ದಾವೂದ್ ತನ್ನ ಮುಂದಿನ ಉತ್ತರಾಧಿಕಾರಿ ಯಾರೆಂದು ಘೋಷಿಸುವ ಸಾಧ್ಯತೆ ಇದೆ.

ಮುಂಬಯಿನಲ್ಲಿರುವ ದಾವೂದ್ ಬಲಗೈ ಬಂಟ ಛೋಟಾ ಶಕೀಲ್‌ನ ಕುಟುಂಬವರ್ಗದವರು ಕಳೆದ 40 ವರ್ಷಗಳಿಂದ ದಾವೂದ್‌ನ ಎಲ್ಲ ಚಟುವಟಿಕೆಗಳಿಗೂ ಸಾಥ್ ನೀಡಿರುವ ಶಕೀಲ್, ದಾವೂದ್ ಉತ್ತರಾಧಿಕಾರಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.