ದೇಶ

ಚರ್ಚೆಗಳಿಗೆ ಅವಕಾಶ ನೀಡದೆ ರಾಜ್ಯಸಭೆಯಲ್ಲಿ ಎಸ್‌ಸಿ/ ಎಸ್‌ಟಿ ಮಸೂದೆಗೆ ಅಂಗೀಕಾರ

ರಾಜ್ಯಸಭೆಯಲ್ಲಿ ಸೋಮವಾರ ಎಸ್‌ಸಿ/ ಎಸ್‌ಟಿ (ಅಮಾನವೀಯ ಕೃತ್ಯ ತಡೆ) ಮಸೂದೆ ಸೇರಿದಂತೆ ಇನ್ನೆರಡು ಮಸೂದೆಗಳನ್ನು ...

ಚರ್ಚೆಗಳಿಗೆ ಅವಕಾಶ ನೀಡದೆ ರಾಜ್ಯಸಭೆಯಲ್ಲಿ ಎಸ್‌ಸಿ/ ಎಸ್‌ಟಿ ಮಸೂದೆಗೆ ಅಂಗೀಕಾರ
ರಾಜ್ಯಸಭಾ ಕಲಾಪ
Published On :
ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಎಸ್‌ಸಿ/ ಎಸ್‌ಟಿ (ಅಮಾನವೀಯ ಕೃತ್ಯ ತಡೆ) ಮಸೂದೆ ಸೇರಿದಂತೆ ಇನ್ನೆರಡು ಮಸೂದೆಗಳನ್ನು ಅಂಗೀಕರಿಸಲಾಗಿದೆ.
ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಗಳಿಗೆ ಅವಕಾಶ ನೀಡದೆ ಕೆಲವೇ ನಿಮಿಷಗಳಲ್ಲಿ ಮಸೂದೆಯನ್ನು ಅಂಗೀಕರಿಸಿರುವುದು ವಿಶೇಷ.
 ನಿರ್ಭಯಾ ಪ್ರಕರಣದಲ್ಲಿ ಬಾಲಾಪರಾಧಿಯನ್ನು ಬಿಡುಗಡೆಗೊಳಿಸಿರುವ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಕಲಾಪಕ್ಕೆ ಅಡ್ಡಿ ಪಡಿಸಿದ್ದರು. ಬೆಳಗ್ಗೆ ಸದನ ಕಲಾಪ ಮುಂದೂಡಿಕೆಯಾಗಿದ್ದು, ನಂತರ ಅಪರಾಹ್ನ 2 ಗಂಟೆಗೆ ಆರಂಭವಾಗಿತ್ತು.
ಕಲಾಪದ ವೇಳೆ ಮಾತನಾಡಿದ ವಿಪಕ್ಷ ನಾಯಕ ಗುಲಾಂ ನಬೀ ಆಜಾದ್, ನಾವು ಎಸ್‌ಸಿ /ಎಸ್‌ಟಿ ಮಸೂದೆಯನ್ನು ಅಂಗೀಕರಿಸಬೇಕೆಂದು ಬಯಸುತ್ತೇವೆ. ಬಾಲಾಪರಾಧಿ ನ್ಯಾಯ ಮಸೂದೆಯನ್ನು ಇಲ್ಲಿ ಪ್ರಸ್ತಾಪಿಸಬೇಕೆಂದು ನಾನು ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದ್ದೆ. ಆದರೆ ಮಾಧ್ಯಮಗಳ ವರದಿ ಕಾರಣ, ಸರ್ಕಾರ ಅದನ್ನೀಗ ಸಪ್ಲಿಮೆಂಟರಿ ಬೇಡಿಕೆಯ ಪಟ್ಟಿಯಲ್ಲಿರಿಸಿದೆ. ಇಷ್ಟೆಲ್ಲಾ ಮಾಡಿಯಾದ ಮೇಲೆ ನಾವು ಸಭೆಯಲ್ಲಿ ಮಸೂದೆ ಮಂಡಿಸಿದ್ದೇವೆ, ವಿಪಕ್ಷಗಳು ಅದಕ್ಕೆ ತಡೆಯೊಡ್ಡಿದೆ ಎಂದು ಹೇಳುತ್ತೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಾದ ನಂತರ ಡೆಪ್ಯುಟಿ ಚೇರ್‌ಮೆನ್ ಪಿಜೆ ಕುರಿಯನ್ ಎಸ್ ಸಿ/ಎಸ್ ಟಿ  ತಿದ್ದುಪಡಿ ಮಸೂದೆ, 2015ನ್ನು ಅಂಗೀಕರಿಸಿದ್ದಾರೆ. ಈ ಮಸೂದೆ ದನಿಮತವಿಲ್ಲದೆ, ಯಾವುದೇ ಚರ್ಚೆಗಳಿಲ್ಲದೆ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.