ಬಿಹಾರದಲ್ಲಿ ಮದ್ಯ ನಿಷೇಧ; ಮದ್ಯದಂಗಡಿ ಬದಲು ಹಾಲಿನ ಬೂತ್ ಆರಂಭ
ಬಿಹಾರದಲ್ಲಿ ಮುಂದಿನ ವರ್ಷ ಏಪ್ರಿಲ್ 1 ರಿಂದ ಮದ್ಯ ನಿಷೇಧ ಮಾಡುವುದಾಗಿ ಆಜ್ಞೆ ಹೊರಡಿಸಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್...

Published On :
ಪಟನಾ: ಬಿಹಾರದಲ್ಲಿ ಮುಂದಿನ ವರ್ಷ ಏಪ್ರಿಲ್ 1 ರಿಂದ ಮದ್ಯ ನಿಷೇಧ ಮಾಡುವುದಾಗಿ ಆಜ್ಞೆ ಹೊರಡಿಸಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗ ಹೊಸತೊಂದು ಯೋಚನೆಯನ್ನು ಮುಂದಿರಿಸಿದ್ದಾರೆ.
ಅದೇನೆಂದರೆ ಮದ್ಯ ನಿಷೇಧ ಮಾಡುವುದರಿಂದ ಅಲ್ಲಿ ಮದ್ಯ ಮಾರಾಟಗಾರರಿಗೆ ಕೆಲಸವಿಲ್ಲದಂತಾಗುತ್ತದೆ. ಹೀಗಾಗಬಾರದು ಎಂಬ ದೃಷ್ಟಿಯಸ್ಸಿ ಮದ್ಯ ಮಾರಾಟಗಾರರು ಮದ್ಯ ನಿಷೇಧದ ನಂತರ ಹಾಲಿನ ಬೂತ್ ತೆರೆಯುವಂತೆ ನಿತೀಶ್ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹಾಲು ಉತ್ಪಾದಕರ ಸಹಕಾರ ಸಂಘ (ಕಾಮ್ಪ್ ಫೀಡ್ ) ಮಾತುಕತೆ ನಡೆಸಿ ಮದ್ಯದಂಗಡಿಯನ್ನು ಹಾಲು ಬೂತ್ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ಭಾರತ ನಿರ್ಮಿತ ವಿದೇಶಿ ಮದ್ಯಗಳು ಬಿಹಾರದಾದ್ಯಂತ 6,000 ಅಂಗಡಿಗಳಲ್ಲಿ ಮಾರಲಾಗುವುದು.
2016 ಏಪ್ರಿಲ್ 1 ರಿಂದ ಬಿಹಾರದಲ್ಲಿ ದೇಸಿ ಮದ್ಯ ಮತ್ತು ಸೆಪ್ಟೆಂಬರ್ ನಿಂದ ವಿದೇಶಿ ಮದ್ಯಗಳಿಗೆ ನಿಷೇಧ ಹೇರಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


