ದೇಶ

ಏಪ್ರಿಲ್ ತಿಂಗಳಿನಿಂದ ಬಿಹಾರದಲ್ಲಿ ದೇಸೀ ಮದ್ಯ ನಿಷೇಧ

ಬಿಹಾರದಲ್ಲಿ ಏಪ್ರಿಲ್ 1 ರಿಂದ ದೇಸೀ ಮದ್ಯಕ್ಕೆ ಸಂಪೂರ್ಣ ನಿಷೇಧ ಹೇರಲು ನಿತೀಶ್ ಕುಮಾರ್ ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ...

ಏಪ್ರಿಲ್ ತಿಂಗಳಿನಿಂದ ಬಿಹಾರದಲ್ಲಿ ದೇಸೀ ಮದ್ಯ ನಿಷೇಧ
ನಿತೀಶ್ ಕುಮಾರ್
Published On :
ಪಟನಾ: ಬಿಹಾರದಲ್ಲಿ ಏಪ್ರಿಲ್ 1 ರಿಂದ ದೇಸೀ ಮದ್ಯಕ್ಕೆ ಸಂಪೂರ್ಣ ನಿಷೇಧ ಹೇರಲು ನಿತೀಶ್ ಕುಮಾರ್ ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಮುಂದಾಗಿರುವ ಸರ್ಕಾರ ಈ ಕಾರ್ಯದ ಮೊದಲ ಹಂತವಾಗಿ ಮುಂದಿನ ವರ್ಷ ಏಪ್ರಿಲ್ 1 ರಿಂದ ದೇಸೀ ಮದ್ಯಕ್ಕೆ ನಿಷೇಧ ಹೇರಿದೆ. 
ಆದಾಗ್ಯೂ, ಭಾರತ ನಿರ್ಮಿತ ವಿದೇಶಿ ಮದ್ಯ (ಐಎಂಎಫ್‌ಎಲ್) ನಿಯಮಿತ ಸರ್ಕಾರಿ ಮದ್ಯ ಅಂಗಡಿಗಳಲ್ಲಿ ಲಭ್ಯವಾಗಲಿದೆ.
ಏಪ್ರಿಲ್ 1, 2016ರ ಆರ್ಥಿಕ ವರ್ಷ ಆರಂಭದಿಂದಲೇ ರಾಜ್ಯದಲ್ಲಿ ದೇಸಿ ಮದ್ಯಕ್ಕೆ ನಿಷೇಧ ಹೇರಲಾಗುವುದು ಎಂದು ಶನಿವಾರ ಸಂಜೆ ನಡೆದ ಸಂಪುಟ ಸಭೆಯ ನಂತರ ಮಾತನಾಡಿದ ನಿತೀಶ್ ಹೇಳಿದ್ದಾರೆ.
ಏಪ್ರಿಲ್ 1 ರ ನಂತರ ರಾಜ್ಯದ ಮುನಿಸಿಪಲ್ ಮತ್ತು ಟೌನ್ ಕೌನ್ಸಿಲ್ ಪ್ರದೇಶಗಳಲ್ಲಿರುವ ಬಿಹಾರ್ ಸ್ಟೇಟ್ ಬಿವರೇಜಸ್ ಕಾರ್ಪೊರೇಷನ್ ಲಿಮಿಟೆಡ್ (ಬಿಸ್‌ಬಿಸಿಎಲ್) ನಲ್ಲಿ ಭಾರತ ನಿರ್ಮಿತ ವಿದೇಶೀ ಮದ್ಯಗಳು ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.