ಡೀಸೆಲ್ ಎಸ್ ಯುವಿ ವಾಹನ ನೋಂದಣಿ ರದ್ದುಮಾಡುವ 'ಸುಪ್ರೀಂ' ನಿರ್ಧಾರಕ್ಕೆ ಕಾರ್ ಡೀಲರ್ ಗಳಿಂದ ಆಕ್ಷೇಪ
2000 ಸಿಸಿ ಸಾಮರ್ಥ್ಯದ ಇಂಜಿನ್ ಹೊಂದಿರುವ ಎಲ್ಲಾ ಡೀಸೆಲ್ ಎಸ್ ಯುವಿ ಗಳ ನೋಂದಣಿಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ನ ಆದೇಶಕ್ಕೆ ಕಾರ್ ಡೀಲರ್ ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: 2000 ಸಿಸಿ ಸಾಮರ್ಥ್ಯದ ಇಂಜಿನ್ ಹೊಂದಿರುವ ಎಲ್ಲಾ ಡೀಸೆಲ್ ಎಸ್ ಯುವಿ ಗಳ ನೋಂದಣಿಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ನ ಆದೇಶಕ್ಕೆ ಕಾರ್ ಡೀಲರ್ ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ಧಾರವನ್ನು ಅನುಚಿತವಾದ ನಿರ್ಧಾರ ಎಂದಿರುವ ಕಾರ್ ದೆಹಲಿಯ ಡೀಲರ್ ಗಳು 2000 ಸಿಸಿ ಸಾಮರ್ಥ್ಯ ಹೊಂದಿರುವ ಎಲ್ಲಾ ಎಸ್ ಯುವಿ ಕಾರುಗಳ ನೋಂದಣಿ ರದ್ದುಗೊಳಿಸುವುದರ ಪರಿಣಾಮ ಕಾರು ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಜನರು ನೌಕರಿ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ನೋಂದಣಿ ರದ್ದುಗೊಳಿಸುವುದರಿಂದ ಅತಿ ಹೆಚ್ಚು ಕೆಲಸಗಾರರನ್ನು ಹೊಂದಿರುವ ಹಾಗೂ ಹೆಚ್ಚು ಎಸ್ ಯುವಿಯನ್ನು ಮಾರಾಟ ಮಾಡುವ ಟಾಟಾ ಮೋಟಾರ್ಸ್, ಮಹೇಂದ್ರ& ಮಹೇಂದ್ರ ಸಂಸ್ಥೆಗಳಿಗೆ ಭಾರಿ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ.
ಸುಪ್ರೀಂ ಕೋರ್ಟ್ ಹೇಳುವಂತೆ ಎಸ್ ಯುವಿ ಗಳಿಂದ ನಿಜವಾಗಲೂ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದಾದರೆ, 2000 ಸಿಸಿ ಸಾಮರ್ಥ್ಯದ ಇಂಜಿನ್ ಹೊಂದಿರುವ ಎಸ್ ಯುವಿಗಳ ನೋಂದಣಿಯನ್ನು ಮಾತ್ರವೇ ಏಕೆ ರದ್ದುಗೊಳಿಸಿರುವುದು? ವಾಯುಮಾಲಿನ್ಯ ಉಂಟಾಗುತ್ತಿದೆಯೆಂದಾದರೆ ಎಲ್ಲಾ ಮಾದರಿಯ ಎಸ್ ಯುವಿ ಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಕಾನ್ಸೆಪ್ಟ್ ಮಹೀಂದ್ರಾದ ಪ್ರಾದೇಶಿಕ ವ್ಯವಸ್ಥಾಪಕ ಸಚಿನ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ನ ನಿರ್ಧಾರದಿಂದಾಗಿ ಈಗಾಗಲೇ ಕಾಯ್ದಿರಿಸಲಾಗಿರುವ ಎಸ್ ಯುವಿಗಳನ್ನು ವಾಪಸ್ ಪಡೆಯಬೇಕು ಹಾಗೂ ಮಹೀಂದ್ರಾ ಸಂಸ್ಥೆಯ ಕ್ವಾಂಟೊ ಮತ್ತು ಟಿಯುವಿ 300 ಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ ಉಳಿದ ಮಾದರಿಯ ಎಸ್ ಯು ವಿ ಗಳನ್ನು ಮಾರಾಟ ಮಾಡಲು ಸಾಧ್ಯವಿರುವುದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


