ಸಿಎಂ ಚಾಂಡಿಗಿಲ್ಲ ಆಹ್ವಾನ: ಪಿಎಂ ಮೋದಿ ಕೇರಳ ಭೇಟಿಗೆ ಮುನ್ನವೇ ವಿವಾದ
ಪ್ರಧಾನಿಯಾಗಿ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿಯವರು ದೇವರ ನಾಡಿಗೆ ಕಾಲಿಡುವ...

Published On :
ತಿರುವನಂತಪುರಂ: ಪ್ರಧಾನಿಯಾಗಿ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿಯವರು ದೇವರ ನಾಡಿಗೆ ಕಾಲಿಡುವ ಮುನ್ನವೇ ಅವರ ಪ್ರವಾಸಕ್ಕೆ ವಿವಾದ ಸುತ್ತಿಕೊಂಡಿದೆ.
ಎಝವಾ ಸಮುದಾಯ ಆಯೋಜಿಸಿರುವ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಆರ್ ಶಂಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರನ್ನು ಹೊರಗಿಡಲಾಗಿದ್ದು, ಈ ವಿಷಯ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಶಂಕರ್ ಅವರು ನೇತೃತ್ವ ವಹಿಸಿದ್ದ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ(ಎಸ್‍ಎನ್‍ಡಿಪಿ) ಹಾಲಿ ಪ್ರಧಾನ ಕಾರ್ಯದರ್ಶಿ ವೆಲ್ಲಪಲ್ಲಿ ನಟೇಶನ್ ತಮಗೆ ಕಾರ್ಯಕ್ರಮದಿಂದ ದೂರವಿರುವಂತೆ ಕೋರಿಕೊಂಡಿದ್ದು, ಆ ಕಾರಣದಿಂದ ತಾವು ಮೋದಿಯವರ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂದು ಚಾಂಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕೇರಳದಲ್ಲಿ ಬಿಜೆಪಿ ತೃತೀಯ ಶಕ್ತಿ: ಮೋದಿ ಕೇರಳದಲ್ಲಿ ಬಿಜೆಪಿಯು ತೃತೀಯ ಶಕ್ತಿಯಾಗಿ ಉದಯಿಸುತ್ತಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ನೇತೃತ್ವದ ಶಕ್ತಿಗಳನ್ನು ಬಗ್ಗುಬಡಿಯಲಿದೆ.
ಆ ಮೂಲಕ ರಾಜ್ಯದ ಅದೃಷ್ಟವನ್ನೇ ಬದಲಾಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸೋಮವಾರ ತೆಕ್ಕಿನಕಾಡ್ ಮೈದಾನ ದಲ್ಲಿ ನಡೆದ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


