ದೇಶ

ಪಾನ್ಸರೆ ಹತ್ಯೆ: ಗಾಯಕ್‍ವಾಡ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆಗೆ ಸಂಬಂಧಿಸಿ ಸನಾತನ ಸಂಸ್ಥೆ ಕಾರ್ಯಕರ್ತ ಸಮೀರ್ ಗಾಯಕ್‍ವಾಡ್ ವಿರುದ್ಧ ಪೊಲೀಸರು...

ಪಾನ್ಸರೆ ಹತ್ಯೆ: ಗಾಯಕ್‍ವಾಡ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ಗೋವಿಂದ ಪಾನ್ಸರೆ
Published On :
ಕೊಲ್ಹಾಪುರ: ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆಗೆ ಸಂಬಂಧಿಸಿ ಸನಾತನ ಸಂಸ್ಥೆ ಕಾರ್ಯಕರ್ತ ಸಮೀರ್ ಗಾಯಕ್‍ವಾಡ್ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಸೆ.16ರಂದು ಬಂಧಿತನಾದ ಗಾಯಕ್‍ವಾಡ್‍ಗೆ ಸ್ಥಳೀಯ ನ್ಯಾಯಾಲಯ ಡಿ.18ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಸೋಮವಾರ ಪೊಲೀಸರು 392 ಪುಟಗಳ ಚಾಜ್ರ್ ಶೀಟ್ ಸಲ್ಲಿಸಿದ್ದಾರೆ. 
ಇದೇ ವೇಳೆ, ಪಾನ್ಸರೆ ಸೊಸೆ ಮೇಧಾ ಪಾನ್ಸರೆ ಹಾಗೂ ಎಡಪಂಥೀಯ ನಾಯಕ ಎನ್ ಡಿ ಪಾಟೀಲ್ ಕೊಲ್ಹಾಪುರ ಹೊಸ ಡಿಎಸ್‍ಪಿ ಪ್ರದೀಪ್ ದೇಶಪಾಂಡೆ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಮಾತುಕತೆ ನಡೆಸಿದ್ದಾರೆ. 
ಕರ್ನಾಟಕದ ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಯೂ ಪೊಲೀಸರು ಗಾಯಕವಾಡ್‍ನನ್ನು ವಿಚಾರಣೆ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.