ಗಂಗೆ ನದಿ ಸ್ವಚ್ಛತೆ ಗಂಗಾ ಪೂಜೆಗೆ ಸಮ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು ಎಂದರೆ ಪವಿತ್ರ ಗಂಗಾ ಪೂಜೆಗೆ ಸಮಾನ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ...

Published On :
ಕೊಲ್ಕತ್ತಾ: ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು ಎಂದರೆ ಪವಿತ್ರ ಗಂಗಾ ಪೂಜೆಗೆ ಸಮಾನ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ.
ಸಾಲ್ಕಿಯಾದ ಬನ್ಶಿಧಾರ್ ಜಲನ್ ಸ್ಮೃತಿ ಮಂದಿರದಲ್ಲಿ ಗಂಗಾನದಿಗೆ ಅಭಿಮುಖವಾಗಿ ನಿರ್ಮಿಸಲಾಗಿರುವ 51 ಅಡಿ ಎತ್ತರದ ಶಿವನ ವಿಗ್ರಹವನ್ನು ಅನಾವರಣಗೊಳಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು. ಹಿಮಾಲಯದಲ್ಲಿ ಹುಟ್ಟುವ ಗಂಗಾ ನದಿ ಬಂಗಾಳ ಕೊಲ್ಲಿ ಸೇರುವವರೆಗೂ ಅಗಾಧ ಪ್ರಭಾವ ಬೀರುತ್ತಾ ಸಾಗಿತ್ತದೆ ಎಂದರು.
ಪ್ರೇಮ, ಅನುಕಂಪ ಮತ್ತು ಮಾನವೀಯತೆ ಎಲ್ಲಾ ಧರ್ಮಗಳ ಸಂದೇಶವಾಗಿದೆ. ಈ ಸಂದೇಶವೇ ಸಮಾಜವನ್ನು ಸೌಹಾರ್ದದ ಕಡೆಗೆ ನಡೆಯುವಂತೆ ಮಾಡುತ್ತದೆ ಎಂದು ಪ್ರಣಬ್ ಮುಖರ್ಜಿ ಹೇಳಿದರು.
ಇದೇ ವೇಳೆ ಗಂಗಾ ತಟದಲ್ಲಿ ಸುಂದರ ದೇವಾಲಯ ಹಾಗೂ ಸುಂದರ ಶಿವ ಪ್ರತಿಮೆ ಸ್ಥಾಪಿಸಿದ್ದಕ್ಕಾಗಿ ದೇವಾಲಯದ ಟ್ರಸ್ಟ್ನ್ನು ಅಭಿನಂದಿಸಿದರು. ಗಂಗಾನದಿಯನ್ನು ಸ್ವಚ್ಛಗೊಳಿಸಲು ಮತ್ತು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ದೇವಾಲಯ ಅಧಿಕಾರಿಗಳು ಮತ್ತು ಟ್ರಸ್ಟ್ನ್ನು ಅವರು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


